Advertisement
ಎಲ್ಲೆಲ್ಲೂ ಕಾವಲು ಪಡೆ: ಶೃಂಗಸಭೆ ನಡೆಯುವ ಬೃಹತ್ ವೇದಿಕೆ ಸುತ್ತಮುತ್ತಲೆಲ್ಲ 5,000 ಪೊಲೀಸರನ್ನು ನಿಯೋಜಿಸಲಾಗಿದೆ. ಕರಾ ವಳಿ ಭದ್ರತಾ ಪಡೆಯ ಬೋಟ್‌ಗಳಲ್ಲಿ ಶಸ್ತ್ರಸಜ್ಜಿತರಾದ ಸಿಬಂದಿ ಸಮುದ್ರದಲ್ಲಿ ಅತ್ತಿಂದಿತ್ತ, ಇತ್ತಿಂದ ಅತ್ತ ಸಂಚರಿಸುತ್ತಾ ಕಾವಲು ಕೆಲಸದಲ್ಲಿ ನಿರತರಾಗಿದ್ದಾರೆ.
Related Articles
Advertisement
ಪರಸ್ಪರ ಅಪಾಯಕಾರಿಯಲ್ಲ: ಈ ಎಲ್ಲ ಬೆಳವಣಿಗೆಗಳ ನಡುವೆ, ಗುರುವಾರ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಚೀನ ರಾಯಬಾರಿ ಸನ್ ವೆಡಾಂಗ್ ಮಾತನಾಡಿದ್ದು, “ಭಾರತ ಮತ್ತು ಚೀನವು ಪರಸ್ಪರರಿಗೆ ಅಪಾಯಕಾರಿಯಲ್ಲ. ಏಷ್ಯಾದ ಈ ಎರಡೂ ದಿಗ್ಗಜ ರಾಷ್ಟ್ರಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಿದರೆ, ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವಲ್ಲಿ ಸಕಾರಾತ್ಮಕ ಶಕ್ತಿ ತುಂಬಲಿವೆ’ ಎಂದಿದ್ದಾರೆ.
ದೇಗುಲಗಳಲ್ಲಿ ಭೇಟಿಗೆ ಸಿದ್ಧತೆ ಶೃಂಗಸಭೆಯ ಸನಿಹದಲ್ಲಿರುವ ದೇಗುಲಗಳಿಗೆ ಮೋದಿ ಮತ್ತು ಜಿನ್‌ಪಿಂಗ್ ಭೇಟಿ ನೀಡಲಿದ್ದು, ಆ ದೇಗುಲಗಳಿಗೂ ಭದ್ರತೆ ಒದಗಿಸಲಾಗಿದೆ. ದೇಗುಲಗಳ ಬಾಹ್ಯ ಗೋಡೆಯ ಸುತ್ತ ಮತ್ತೂಂದು ತಾತ್ಕಾಲಿಕ ಗೋಡೆ ನಿರ್ಮಿಸಲಾಗಿದ್ದು, ಉಭಯ ನಾಯಕರು ದೇಗುಲಗಳಿಗೆ ಸಾಗಿ ಹೋಗುವ ಮಾರ್ಗದ ಎರಡೂ ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಆ ಮಾರ್ಗದಲ್ಲಿ ರಂಗೋಲಿ ಹಾಕಲಾಗುತ್ತಿದೆ. ಜತೆಗೆ, ಜನಸಂದಣಿ ಇರುವ ಮಹಾಬಲಿಪುರಂ ಹಾಗೂ ಶೃಂಗಸಭೆ ನಡೆಯುವ ಸ್ಥಳಗಳಲ್ಲಿ ಪೊಲೀಸರು, ಭದ್ರತಾಪಡೆಗಳು ಹಾಗೂ ಇನ್ನಿತರ ಸಿಬಂದಿಗೆ ಆಹಾರ, ವಸತಿ ಹಾಗೂ ಶೌಚಾಲಯಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ರ್ಯಾಲಿಯ ಸ್ವಾಗತ
ಶೃಂಗಸಭೆಗೆ ಆಗಮಿಸುವ ನಾಯಕರು, ತಮ್ಮ ವಾಹನಗಳಿಂದ ಇಳಿಯುವ ಪ್ರದೇಶದಲ್ಲಿ ತಮಿಳು, ಹಿಂದಿ ಮತ್ತು ಚೀನೀ ಬಾಷೆಯಲ್ಲಿ ಸ್ವಾಗತ ಸಂದೇಶಗಳನ್ನು ಅಳವಡಿಸಲಾಗಿದೆ. ಸ್ವಾಗತ ಕಾರ್ಯಕ್ರಮದ ಅಂಗವಾಗಿ, ರಾಷ್ಟ್ರೀಯ ಐಕ್ಯತಾ ರ್ಯಾಲಿ ಏರ್ಪಡಿಸಲಾಗಿದೆ. ಅದರಲ್ಲಿ ನೂರಾರು ಮಕ್ಕಳು ಪಾಲ್ಗೊಳ್ಳಲಿದ್ದಾರೆ.