Advertisement

ಶಿವರಾತ್ರಿಗೆ ರೈಲ್ವೆ ಇಲಾಖೆಯಿಂದ ಶಿವನ ದೇವಾಲಯಗಳಿಗೆ ಟೂರ್ ಪ್ಯಾಕೇಜ್; ವಿವರ ಇಲ್ಲಿದೆ

09:26 PM Feb 12, 2023 | Team Udayavani |

ದೇಶದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವ ಮಹಾಶಿವರಾತ್ರಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿಯ ಶಿವರಾತ್ರಿಗೆ ಭಾರತೀಯ ರೈಲ್ವೆ ಶಿವಭಕ್ತರಿಗೆ ಹೊಸ ಉಡುಗೊರೆ ನೀಡಿದೆ. ಶಿವಭಕ್ತರ ಪಾಲಿನ ಸ್ವರ್ಗವೆಂದೇ ಪರಿಗಣಿಸಲಾಗುವ ಜ್ಯೋತಿರ್ಲಿಂಗಗಳ ದರ್ಶನ ಪಡೆಯಲು ರೈಲ್ವೆ “ಮಹಾಶಿವರಾತ್ರಿ ನವಜ್ಯೋತಿರ್ಲಿಂಗ ಯಾತ್ರೆ’ ಆರಂಭಿಸಿದೆ. ಈ ಕುರಿತಾದ ವಿವರ ಇಂತಿದೆ.

Advertisement

ಜ್ಯೋತಿರ್ಲಿಂಗ ದರ್ಶನ
ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳ ದರ್ಶನದಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಶಿವಭಕ್ತರ ನಂಬಿಕೆ. ಹೀಗಾಗಿ ರೈಲ್ವೆ ಜ್ಯೀತಿರ್ಲಿಂಗಗಳ ದರ್ಶನಕ್ಕಾಗಿ ಈ ಯಾತ್ರೆ ಆರಂಭಿಸಿದೆ.12 ಜ್ಯೋತಿರ್ಲಿಂಗಗಳ ಪೈಕಿ ಯಾತ್ರಾರ್ಥಿಗಳು 9 ಜ್ಯೋತಿರ್ಲಿಂಗಗಳ ದರ್ಶನ ಪಡೆದುಕೊಳ್ಳಲು ಪ್ರವಾಸ ಅನುವು ಮಾಡಿಕೊಡಲಿದೆ.

ಯಾವೆಲ್ಲ ಯಾತ್ರಾ ಕ್ಷೇತ್ರಗಳು?
ಮಹಾಕಾಲೇಶ್ವರ, ಓಂಕಾರೇಶ್ವರ, ಸೋಮನಾಥ, ತ್ರಯಂಬಕೇಶ್ವರ, ಭೀಮಾಶಂಕರ, ಗುರುನೇಶ್ವರ, ಅಯುಂಧ್‌ ನಾಗನಾಥ್‌, ಪರ್ಲಿ ವೈಜಿನಾಥ್‌, ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಪ್ರವಾಸ ಒಳಗೊಂಡಿದೆ.

*ಮಾ.8 -ಮಾ.20ರ ವರೆಗೆ ಯಾತ್ರೆ
*12 ರಾತ್ರಿ-13 ಹಗಲು ಪ್ರವಾಸ
* ಮಧುರೈನಿಂದ ಯಾತ್ರೆ ಆರಂಭ
* ಪ್ರತಿ ವ್ಯಕ್ತಿಗೆ 15,350 ರೂ. ಶುಲ್ಕ
* //www.irctcportal.in. ನಲ್ಲಿ ನೋಂದಣಿ

Advertisement

Udayavani is now on Telegram. Click here to join our channel and stay updated with the latest news.

Next