Advertisement

ಪಾಲ್‌ಘರ್‌ನಲ್ಲಿ ಭಾರೀ ಮಳೆಗೆ ಕೊಚ್ಚಿ ಹೋದ ಸೇತುವೆ; ಸಾವು ನೋವು ಇಲ್ಲ

10:28 AM Jul 12, 2019 | Team Udayavani |

ಪಾಲ್‌ಘರ್‌ : ಮಹಾರಾಷ್ಟ್ರದ ಪಾಲ್‌ಘರ್‌ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮವಾಗಿ ಸೇತುವೆಯೊಂದರ ದೊಡ್ಡ ಭಾಗ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

Advertisement

ಆದರೆ ಈ ದುರಂತದಲ್ಲಿ ಯಾವುದೇ ಸಾವು, ನೋವು ಆಗಿರುವ ವರದಿ ಇಲ್ಲ ಎಂದು ಜಿಲ್ಲಾ ವಿಕೋಪ ನಿರ್ವಹಣ ವಿಭಾಗದ ಮುಖ್ಯಸ್ಥ ವಿವೇಕಾನಂದ ಕದಂ ತಿಳಿಸಿದ್ದಾರೆ.

ಪಾಲ್‌ಘರ್‌ನ ಮೊಖಾಡ ತಾಲೂಕಿನ ಮೋರ್ಚುಂಡಿ ಗ್ರಾಮದಲ್ಲಿನ ಸಣ್ಣ ನದಿಯೊಂದಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಈ ಸೇತುವೆ ಈ ಭಾಗದ ಪ್ರಮುಖ ಸಂಪರ್ಕ ಸೇತುವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next