Advertisement

ಥಾಣೆ: ಪೊಲೀಸರ ಸೋಗಿನಲ್ಲಿ ವೈದ್ಯರ ಸುಲಿಗೆ ಯತ್ನ; ಐವರು ಅರೆಸ್ಟ್‌

04:13 PM Aug 25, 2018 | udayavani editorial |

ಥಾಣೆ : ಪೊಲೀಸ್‌ ಅಧಿಕಾರಿಗಳ ಸೋಗಿನಲ್ಲಿ  ವೈದ್ಯರೊಬ್ಬರಿಂದ 2 ಲಕ್ಷ ರೂ. ಕೀಳಲು ಯತ್ನಿಸಿದ ಇಬ್ಬರು ಮಹಿಳೆಯರ ಸಹಿತ ಐವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಮುಂಬ್ರಾದಲ್ಲಿನ ಡಾ. ನದೀಂ ಬೇಗ್‌ ಅವರ ಕ್ಲಿನಿಕ್‌ಗೆ ಪೊಲೀಸ್‌ ಅಧಿಕಾರಿಗಳ ಸೋಗಿನಲ್ಲಿ ತೆರಳಿದ ಈ ಐವರು ಆರೋಪಿಗಳು ಅಲ್ಲಿ ಗರ್ಭಪಾತದ ಎಂಟಿಪಿ ಕಿಟ್‌ ಇರುವುದನ್ನು ಕಂಡು ತಾವು ಕೇಸ್‌ ಹಾಕುವುದಾಗಿಯೂ ಇಲ್ಲದಿದ್ದರೆ ತಮಗೆ 2 ಲಕ್ಷ ರೂ. ಕೊಡಬೇಕೆಂದೂ ತಾಕೀತು ಮಾಡಿದ್ದರು. 

ಕೊನೆಗೆ 1.50 ಲಕ್ಷ ರೂ. ಕೊಡಲು ಒಪ್ಪಿದ ವೈದ್ಯ ಬೇಗ್‌ ಅವರು ರೆಸ್ಟೋರೆಂಟ್‌ ಒಂದರಲ್ಲಿ ಈ ಹಣ ಕೊಡುವುದಾಗಿ ಹೇಳಿ ಅಲ್ಲಿಗೆ ಬರುವಂತೆ ಆರೋಪಿಗಳಿಗೆ ಹೇಳಿದರು. ರೆಸ್ಟೋರೆಂಟ್‌ನಲ್ಲಿದ್ದ ತಮ್ಮ ಸಹೋದ್ಯೋಗಿ ವೈದ್ಯರನ್ನು ಜಾಗೃತ ಗೊಳಿಸಿದ ವೈದ್ಯ ನದೀಂ ಬೇಗ್‌ ಅವರು ಉಪಾಯದಿಂದ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. 

ಬಂಧಿತರನ್ನು ಸಂದೀಪ್‌ ಕಾಂಬ್ಳಿ (32), ಅಶೋಕ್‌ ಶಿರವಾಡೆ (30), ಶೈಲೇಶ್‌ ಯಾದವ್‌ (31), ಅನಿತಾ ಥಾಪಾ (40) ಮತ್ತು ಸವಿತಾ ಜಾಧವ್‌ (30) ಎಂದು ಗುರುತಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next