Advertisement

ಟರ್ಕಿಯಲ್ಲಿ ಮತ್ತೆ 5.6 ತೀವ್ರತೆಯ ಭೂಕಂಪ; ಹಲವು ಕಟ್ಟಡಗಳ ಕುಸಿತ

08:14 PM Feb 27, 2023 | Team Udayavani |

ಅಂಕಾರಾ: ದಕ್ಷಿಣ ಟರ್ಕಿಯಲ್ಲಿ ಸೋಮವಾರ 5.6 ತೀವ್ರತೆಯ ಭೂಕಂಪ ಸಂಭವಿಸಿದೆ. ದುರಂತದ ಭೂಕಂಪನವು ದೇಶದಲ್ಲಿ ಅಪಾರ ಹಾನಿಗೆ ಕಾರಣವಾದ ಮೂರು ವಾರಗಳ ನಂತರ ಅದಾಗಲೇ ಹಾನಿಗೊಳಗಾದ ಕೆಲವು ಕಟ್ಟಡಗಳು ಕುಸಿಯಲು ಕಾರಣವಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಟ್ಟಡವೊಂದರ ಅವಶೇಷಗಳಡಿಯಲ್ಲಿ ತಂದೆ ಮತ್ತು ಮಗಳು ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.

Advertisement

ಸೋಮವಾರದ ಭೂಕಂಪವು ಮಲತ್ಯಾ ಪ್ರಾಂತ್ಯದ ಯೆಸಿಲ್ಯುರ್ಟ್ ಪಟ್ಟಣದಲ್ಲಿ ಕೇಂದ್ರೀಕೃತವಾಗಿತ್ತು ಎಂದು ದೇಶದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

ಯೆಸಿಲ್ಯುರ್ಟ್‌ ಪಟ್ಟಣದಲ್ಲಿ ಹಲವಾರು ಕಟ್ಟಡಗಳು ಕುಸಿದಿವೆ, ಇದರಲ್ಲಿ ತಂದೆ ಮತ್ತು ಮಗಳು ಸಿಕ್ಕಿಬಿದ್ದ ನಾಲ್ಕು ಅಂತಸ್ತಿನ ಕಟ್ಟಡವೂ ಸೇರಿದೆ ಎಂದು ಮೇಯರ್, ಮೆಹ್ಮೆಟ್ ಸಿನಾರ್, ಹೇಬರ್‌ಟರ್ಕ್ ತಿಳಿಸಿದ್ದಾರೆ. ಇಬ್ಬರು ಸಾಮಾನುಗಳನ್ನು ಸಂಗ್ರಹಿಸಲು ಹಾನಿಗೊಳಗಾದ ಕಟ್ಟಡಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.

ನಿಲುಗಡೆ ಮಾಡಿದ ಕೆಲವು ಕಾರುಗಳ ಮೇಲೆ ಕಟ್ಟಡ ಉರುಳಿದ್ದು ರಕ್ಷಣಾ ತಂಡಗಳು ಶೋಧಿಸುತ್ತಿವೆ ಎಂದು ಹೇಬರ್‌ಟರ್ಕ್ ವರದಿ ಮಾಡಿದೆ.

ಫೆಬ್ರವರಿ 6 ರಂದು ದಕ್ಷಿಣ ಟರ್ಕಿಯ ಮತ್ತು ಉತ್ತರ ಸಿರಿಯಾದ ಭಾಗಗಳನ್ನು ಧ್ವಂಸಗೊಳಿಸಿದ 7.8 ತೀವ್ರತೆಯ ಭೂಕಂಪದಿಂದ ಹಾನಿಗೊಳಗಾದ 11 ಟರ್ಕಿಶ್ ಪ್ರಾಂತ್ಯಗಳಲ್ಲಿ ಮಲತ್ಯಾ ಕೂಡ ಸೇರಿದೆ.

Advertisement

ಭೂಕಂಪವು ಎರಡೂ ದೇಶಗಳಲ್ಲಿ 48,000 ಕ್ಕೂ ಹೆಚ್ಚು ಮಾನವ ಜೀವ ಹಾನಿಗಳಿಗೆ ಕಾರಣವಾಗಿದ್ದು ಟರ್ಕಿಯೆಯಲ್ಲಿ 173,000 ಕಟ್ಟಡಗಳ ಕುಸಿತ ಮತ್ತು ಗಂಭೀರ ಹಾನಿಗೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next