Advertisement

ಸ್ವಚ್ಛತೆ ಮನಸ್ಸಿನಲ್ಲಿ ಅಂತರ್ಗತವಾಗಲಿ: ಡಾ|ರವಿ

10:57 AM Jun 15, 2018 | Team Udayavani |

ಕೊಡಿಯಾಲಬೈಲ್‌ : ಸ್ವಚ್ಛತೆ ಎಂಬುದು ಆಲೋಚನ ಕ್ರಮವಾಗಬೇಕು. ಆ ಮೂಲಕ ಪ್ರತಿಯೊಬ್ಬರ ಮನಸ್ಸಿನಲ್ಲಿ ಅಂತರ್ಗತವಾಗಬೇಕು ಎಂದು ಜಿ.ಪಂ. ಸಿಇಒ ಡಾ| ಎಂ. ಆರ್‌. ರವಿ ಹೇಳಿದರು. ರಾಮಕೃಷ್ಣ ಮಿಶನ್‌ ಸ್ವಚ್ಛ ಮಂಗಳೂರು ಆಶ್ರಯದಲ್ಲಿ ‘ಸ್ವಚ್ಛತೆಗಾಗಿ ಜಾದೂ’ ದ.ಕ. ಜಿಲ್ಲೆಯಾದ್ಯಂತ 100 ಶಾಲೆಗಳಲ್ಲಿ ಮೆಗಾ ಮ್ಯಾಜಿಕ್‌ ಸ್ಟಾರ್‌ ಕುದ್ರೋಳಿ ಗಣೇಶ್‌ ಅವರಿಂದ ನಡೆಯುವ ಜಾದೂ ಪ್ರದರ್ಶನವನ್ನು ಅವರು ಕೊಡಿಯಾಲಬೈಲ್‌ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಗುರುವಾರ ಉದ್ಘಾಟಿಸಿದರು.

Advertisement

ಭಾರತದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ಸ್ವಚ್ಛ ಮತ್ತು ಸುಂದರ ಭಾರತ ನಿರ್ಮಾಣದ ಕನಸನ್ನು ಎಳವೆಯಿಂದಲೇ ಮಕ್ಕಳಲ್ಲಿ ಬಿತ್ತಬೇಕು. ಆ ಮೂಲಕ ಸ್ವಚ್ಛ ಭಾರತ ಕನಸನ್ನು ಸಾಕಾರಗೊಳಿಸಬೇಕು ಎಂದು ಅವರು ಆಶಿಸಿದರು.

 ದೇಶ ಸ್ವಚ್ಛವಾಗಿಟ್ಟುಕೊಳ್ಳಿ
ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮೀ ಜಿತಕಾಮಾನಂದಜೀ ಮಹಾರಾಜ್‌ ಮಾತನಾಡಿ, ಭಾರತದ ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳು ಮನೆ, ಮನಗಳನ್ನು ಶುಚಿಯಾಗಿ ಡುವುದರೊಂದಿಗೆ ಸಮಾಜ, ಆ ಮೂಲಕ ದೇಶವನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು ಎಂದು ನುಡಿದರು.

ಎಂಆರ್‌ಪಿಎಲ್‌ ಜನರಲ್‌ ಮ್ಯಾನೇಜರ್‌ ಹರೀಶ್‌ ಬಾಳಿಗಾ, ಕೆನರಾ ಹೈಸ್ಕೂಲ್‌ ಅಸೋಸಿಯೇಶನ್‌ ಕಾರ್ಯದರ್ಶಿ ರಂಗನಾಥ್‌ ಭಟ್‌, ಜಾದೂ ಕಲಾವಿದ ಕುದ್ರೋಳಿ ಗಣೇಶ್‌, ಸ್ವತ್ಛ ಮಂಗಳೂರು ಮುಖ್ಯ ಸಂಯೋಜಕ ಉಮಾನಾಥ್‌ ಕೋಟೆಕಾರ್‌ ಉಪಸ್ಥಿತರಿದ್ದರು.

ಪರಿಸರ ಉಳಿಸಲು ಜಾದೂ ತಂತ್ರ
ಜಾದೂ ಮೂಲಕ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಸೃಷ್ಟಿಸಿದ ಜಾದೂಗಾರ ಕುದ್ರೋಳಿ ಗಣೇಶ್‌ ಬಳಿಕ ಜಾದೂವಿನಿಂದಲೇ ಹೂಹಾರ ಸೃಷ್ಟಿಸಿ ಸ್ವಾಮೀಜಿಯವರ ಭಾವಚಿತ್ರಕ್ಕೆ ಹಾಕಿದರು. ಸ್ವಚ್ಛ ಭಾರತ ಪರಿಕಲ್ಪನೆ ಸಾರುವ ವಿವಿಧ ಜಾದೂಗಳನ್ನು ಪ್ರದರ್ಶಿಸಿದರು. ಭೂಮಿಯ ಒಡಲಿಗೆ ಕಸ, ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ನಿರಂತರ ಸುರಿಯುತ್ತಿದ್ದರೆ, ಒಣ ಭೂಮಿ, ನೀರಿನ ಅಲಭ್ಯತೆ, ವಿಷಾನಿಲ ಉತ್ಪತ್ತಿಯನ್ನು ಜಾದೂ ಮೂಲಕ ಸೃಷ್ಟಿಸಿ ಪ್ರದರ್ಶಿಸಿದರು. ಅಲ್ಲದೆ ಗಿಡಕ್ಕೆ ನೀರೆರೆದು ಪೋಷಿಸುತ್ತಿದ್ದರೆ ಹೆಮ್ಮರವಾಗಿ ಬೆಳೆಯುವ ಬಗೆಯನ್ನೂ ತಮ್ಮ ಮಾಯಾ ಕೈಚಳಕದಿಂದ ಪ್ರದರ್ಶಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next