Advertisement
ಬೇಸಿಗೆ ಬಿರುಬಿಸಿಲಿನಲ್ಲಿಯೂ ಇಲ್ಲಿನ ಶಿಕ್ಷಕ ರಘುಪತಿ, ಮಕ್ಕಳು ಹಾಗೂ ಪೋಷಕರ ಶ್ರಮದಿಂದ ಸುಮಾರು 1 ಎಕರೆ ಪ್ರದೇಶದಲ್ಲಿರುವ ಶಾಲಾವರಣ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಗ್ರಾಮೀಣ ಸೊಗಡಿನ ಕಲಾಕೃತಿ, ಕಾರಂಜಿಗಳ ನರ್ತನದ ನಡುವೆ ಕಣ್ಮನ ಸೆಳೆಯುತ್ತಿದೆ.
ಬೆಟ್ಟಹಳ್ಳಿ ಕಾಲೋನಿ ಶಾಲೆಯ ಸುಂದರ ಪರಿಸರ ಒಂದೆರಡು ತಿಂಗಳುಗಳ ಶ್ರಮವಲ್ಲ. ಶಿಕ್ಷಕ ರಘುಪತಿ ಅವರ 10 ವರ್ಷಗಳ ತಪಸ್ಸು. ರಜಾದಿನಗಳಲ್ಲಿಯೂ ಶಿಕ್ಷಕರು ಹೇಳಿದ ಕಾರ್ಯಗಳನ್ನು ಚಾಚುತಪ್ಪದೇ ಪಾಲಿಸುತ್ತಾ ಪರಿಸರ ಅಭಿವೃದ್ದಿಗೆ ತಮ್ಮದೇ ಆದ ಕಾಣಿಕೆಯನ್ನು ನೀಡುತ್ತಿದ್ದಾರೆ. ಮಕ್ಕಳ ಶ್ರಮದ ಕಾರ್ಯನಿರ್ವಹಣೆಗೆ ಪೋಷಕರ ಬೆಂಬಲವೂ ಹೆಚ್ಚಿನದು.
Related Articles
Advertisement
ಈ ಶಾಲೆ ಇತರೆ ಶಾಲೆಗಳಿಗೂ ಸ್ಪೂರ್ತಿಯಾಗಿದೆ. ವೀರಸಾಗರ, ಲಕ್ಕೇನಹಳ್ಳಿ, ಹುಲಿಕಲ್, ಹೊಸಹಳ್ಳಿ, ಗೊಲ್ಲರಹಟ್ಟಿ, ಬೆಟ್ಟಹಳ್ಳಿ, ವೆಂಕಟಯ್ಯನಪಾಳ್ಯ, ಹೂಜೇನಹಳ್ಳಿ ಶಾಲೆಗಳಲ್ಲಿ ಉತ್ತಮ ಪರಿಸರ ಕಾಳಜಿ ಇದ್ದು ಚೆನ್ನಾಗಿ ನಿರ್ವಹಣೆ ಮಾಡಲಾಗಿದೆ.
ಗ್ರಾಮದಲ್ಲಿ ನೀರು ಇಲ್ಲದ ವೇಳೆ ಮಕ್ಕಳು ಒಂದೆರಡು ಕಿ ುà ಗಳಿಂದ ನೀರನ್ನು ಹೊತ್ತು ತಂದು ಸಸಿಗಳನ್ನು ಕಾಪಾಡಿದ್ದಾರೆ. ಶನಿವಾರ, ಭಾನುವಾರವೆನ್ನದೆ ಕಾರ್ಯನಿರ್ವಸಿದ್ದಾರೆ. ಅವರ ಶ್ರಮದ ಕುರುಹಾಗಿ ಇಂದು ಶಾಲೆಯನ್ನು ಕಾಣಬಹುದು ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಪಾತರಾಜು.
ಸಂಧ್ಯಾ ಕೆ