Advertisement

ಗ್ರಾಮೀಣರೇ ಶುದ್ಧ ನೀರು ಬಳಸಿ

04:48 PM Aug 29, 2019 | Naveen |

ಮಾಗಡಿ: ಕೇವಲ ಶ್ರೀಮಂತರು, ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಶುದ್ಧ ನೀರು ಕುಡಿದರೆ ಸಾಲದು. ಗ್ರಾಮೀಣ ಜನರು ಶುದ್ಧ ನೀರು ಕುಡಿದು ಎಲ್ಲರಂತೆ ಆರೋಗ್ಯವಂತರಾಗಿರಬೇಕು ಎಂದು ಶಾಸಕ ಎ.ಮಂಜುನಾಥ್‌ ತಿಳಿಸಿದರು.

Advertisement

ತಾಲೂಕಿನ ಸಿಡಿಗನಹಳ್ಳಿ ಗ್ರಾಮದಲ್ಲಿ ನೂತನ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಸಿಡಿಗನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಲಾಗಿದೆ. ಟೊಯೋಟಾ ಕಿರ್ಲೋಸ್ಕರ್‌ ಮೋಟರ್‌ ಕಂಪನಿ ಗ್ರಾಮೀಣ ಭಾಗದ ಜನರ ಮತ್ತು ಶಾಲಾ ಮಕ್ಕಳ ಉಪಯೋಗಕ್ಕಾಗಿ ಶಾಲೆಗಳಿಗೆ ಶೌಚಾಲಯ, ಬಡ ಮಕ್ಕಳಿಗೆ ಪುಸ್ತಕ, ಬ್ಯಾಗ್‌ ವಿತರಣೆ, ಶಿಥಿಲ ಶಾಲಾ ಕಟ್ಟಡಗಳ ಪುನರ್‌ ನಿರ್ಮಾಣ ಸೇರಿದಂತೆ ಹಲವು ಸಮಾಜಮುಖೀ ಸೇವೆ ಮಾಡಿಕೊಂಡು ಬರುತ್ತಿದೆ. ಈಗಾಗಲೇ 37 ಶುದ್ಧ ಕುಡಿವ ನೀರಿನ ಘಟಕ ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು.

ಕಲುಷಿತ ನೀರು ಸೇವನೆಯಿಂದ ರೋಗ: ಕಲುಷಿತ ನೀರು ಸೇವನೆಯಿಂದ ರೋಗಕ್ಕೆ ತುತ್ತಾಗುತ್ತಿದ್ದೇವೆ. ಸುಂದರ ಪರಿಸರ ಹಾಗೂ ಆರೋಗ್ಯಕ್ಕಾಗಿ ಗ್ರಾಮೀಣ ಜನತೆ ಶುಚಿತ್ವವನ್ನು ಕಾಪಾಡಬೇಕು. ಟೊಯೋಟಾ ಕಂಪನಿಯವರೇ 15 ವರ್ಷ ನಿರ್ವಹಣೆ ಮಾಡಲಿದ್ದಾರೆ. ಖಾಸಗಿ ಕಂಪನಿಯಡಿ ನಿರ್ಮಾಣಗೊಂಡ ಘಟಕಗಳು ಉತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಸರ್ಕಾರ, ಶಾಸಕರ ಅನುದಾನದಡಿ ನಿರ್ಮಾಣಗೊಂಡ ಶುದ್ಧ ನೀರಿನ ಘಟಕಗಳು ನಿರ್ವಹಣೆಯಲ್ಲಿ ವಿಫ‌ಲಗೊಂಡಿದ್ದೇವೆ. ಇದು ತಲೆತಗ್ಗಿಸುವ ಕೆಲಸ ಎಂದು ಬೇಸರ ವ್ಯಕ್ತಪಡಿಸಿದರು.

ನೀರು ಪೋಲಾಗದಂತೆ ತಂತ್ರಜ್ಞಾನ ಅಳವಡಿಕೆ: ಟೊಯೋಟಾ ಕಿರ್ಲೋಸ್ಕರ್‌ ಮೋಟರ್‌ ಪ್ರೈವೇಟ್ ಲಿಮಿಟೆಡ್‌ ಕಂಪನಿ ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಹೆಗ್ಡೆ ಮಾತನಾಡಿ, ಇದು 1200 ಲೀಟರ್‌ ಶುದ್ಧ ಕುಡಿಯುವ ನೀರಿನ ಘಟಕವಾಗಿದೆ. ಇದರ ನಿರ್ವಹಣೆಯೂ ತಾಂತ್ರಿಕವಾಗಿದೆ. ಮೊಬೈಲ್ನಲ್ಲಿಯೇ ಎಲ್ಲಾ ಲೋಪದೋಷಗಳನ್ನು ನೋಡಬಹುದು. ಈ ಘಟಕಕ್ಕೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕ್ಯಾನ್‌ ಕ್ಲೀನಿಂಗ್‌ ಸಹ ಮಾಡಲಾಗುತ್ತದೆ. ಶುದ್ಧೀಕರಣದಿಂದ ಹೆಚ್ಚಿನ ನೀರು ಪೋಲಾಗದಂತೆ ವಿಶೇಷ ತಂತ್ರಜ್ಞಾನದಿಂದ ಘಟಕ ಕೂಡಿದೆ. ಗ್ರಾಮೀಣ ಜನತೆ ಶುದ್ಧ ನೀರು ಕುಡಿದು ಆರೋಗ್ಯವಂತರಾಗಿರಬೇಕು ಎಂದರು.

ಈ ವೇಳೆ ಬೆಳಗುಂಬ ಗ್ರಾಪಂ ಅಧ್ಯಕ್ಷೆ ಯಶೋಧಮ್ಮ, ಕಂಪನಿ ಉಪಾಧ್ಯಕ್ಷ ನವೀನ್‌ ಸೋನಿ, ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ, ಎಚ್.ಜೆ.ಕಿರಣ್‌, ಗ್ರಾಪಂ ಮಾಜಿ ಅಧ್ಯಕ್ಷ ಹೊನ್ನಪ್ಪ, ಕೋಟಪ್ಪ, ಸಿಡಿಗನಹಳ್ಳಿ ವೆಂಕಟೇಶ್‌, ವನರಾಜು, ರಾಮಣ್ಣ, ಮಡಿವಾಳರ ಪಾಳ್ಯದ ನರಸಿಂಹಯ್ಯ, ಶಿವಲಿಂಗಯ್ಯ, ಹರ್ತಿ ಮಾರಣ್ಣ, ರಂಗೇನಹಳ್ಳಿ ಜಯಣ್ಣ, ಉಗ್ರಪ್ಪ, ಬಿ.ಆರ್‌.ಗುಡ್ಡೇಗೌಡ, ಪಿಡಿಒ ಪುರುಷೋತ್ತಮ, ಧನಂಜಯ ಕುಮಾರ್‌, ಶಿವರಾಜು, ವೆಂಕಟಾಚಲಯ್ಯ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next