ಮಾಗಡಿ: ಪಟ್ಟಣದ ಮಾರುಕಟ್ಟೆಯಲ್ಲಿ ಅವರೆ ಕಾಯಿ ಮಾರಾಟ ಭರದಿಂದ ನಡೆಯುತ್ತಿದ್ದು, ಇದರಿಂದಾಗಿ ಎಲ್ಲೆಡೆ ಅವರೆ ಕಾಯಿಯ ಸೊಗಡು ಗಮಗಮಿಸುತ್ತಿದೆ. ಮಾಗಡಿ ಕಲ್ಲುಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶವಾಗಿದೆ. ಇಲ್ಲಿನ ಕೆಂಪು ಮರಳು ಮಿಶ್ರಿತ ಮಣ್ಣಿನಲ್ಲಿ ಬೆಳೆದ ಅವರೆಕಾಯಿ ಬಹಳ ಚೆನ್ನಾಗಿ ಬರುತ್ತದೆ. ಬಿಸಿಲಿನ ತಾಪಮಾನ ಹೆಚ್ಚಾದಂತೆಲ್ಲ ಅವರೆಕಾಯಿಯ ಸೊಗಡು ಹೆಚ್ಚಾಗಿಯೇ ಇರುತ್ತದೆ. ರುಚಿಯೂ ಅಧಿಕವಾಗಿರುತ್ತದೆ. ಇದರಿಂದ ಬೆಂಗಳೂರಿನಲ್ಲಿ ಮಾಗಡಿ ಅವರೆಕಾಯಿಗೆ ಭಾರಿ ಬೇಡಿಕೆ ಇದೆ.
Advertisement
ದಲ್ಲಾಳಿಗಳ ಲಾಭ: ತಾಲೂಕಿನಲ್ಲಿ ಸುಮಾರು 3 ಸಾವಿರ ಹೇಕ್ಟರ್ ಪ್ರದೇಶದಲ್ಲಿ ಅವರೆಕಾಯಿ ಬೆಳೆಯುತ್ತಾರೆ. ರೈತರು ತಮ್ಮ ಹೊಲದಲ್ಲಿ ಅವರೆಕಾಯಿ ಕಿತ್ತು ಮುಂಜಾನೆಯೇ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಾರೆ. ಇದಕ್ಕಾಗಿಯೇ ದಳ್ಳಾಳಿಗಳು ಬೆಂಗಳೂರಿನಿಂದ ಮಾಗಡಿಗೆ ಬಂದು ಕಡಿಮೆ ಬೆಲೆಗೆ ಖರೀದಿಸಿ, ಬೆಂಗಳೂ ರಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಕೊಳ್ಳುತ್ತಾರೆ.
ಹೇಳಿ ಮಾಡಿಸಿದಂತ ಧನುರ್ಮಾಸ. ಈ ಮಾಸದಲ್ಲೇ ಅವರೆಕಾಯಿಯಿಂದ ತಯಾರಿಸಿದ ಆಹಾರ ಮೇಳ ಸಹ ಹಲವು ವರ್ಷಗಳಿಂದಲೂ ಬೆಂಗಳೂರಿನ ವಿಶ್ವೇಶ್ವರಪುರಂನ ವಾಸವಿ ರಸ್ತೆಯಲ್ಲಿ ಮತ್ತು ಮಲ್ಲೇಶ್ವರಂನಲ್ಲಿ ನಡೆದುಕೊಂಡು ಬರುತ್ತಿದೆ. ಅವರೆಕಾಯಿಯ ಖ್ಯಾದ ಆಹಾರ ಪ್ರಿಯರನ್ನು ಬಾಯಿ ಚಪ್ಪರಿಸುವಂತೆ ಮಾಡುತ್ತದೆ.
Related Articles
ಉತ್ತಮ ಇಳುವರಿಬರುತ್ತದೆ. ಸೊಗಡಿನಿಂದ ಕೂಡಿದ ಮಾಗಡಿ
ಅವರೆಕಾಯಿ ಬಹಳ ರುಚಿಯಾಗಿರುತ್ತದೆ. ಆದ್ದರಿಂದ ಪಟ್ಟಣ ನಗರ ಪ್ರದೇಶದಲ್ಲಿ ಅತ್ಯಂತಬೇಡಿಕೆಯೂ ಇದೆ.
● ಶಿವಶೆಂಕರ್,
ಸಹಾಯಕ ಕೃಷಿ ನಿರ್ದೇಶಕ
Advertisement
ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ದಳ್ಳಾಳಿಗಳ ಕಪಿ ಮುಷ್ಠಿಗೆ ರೈತರು ಸಲಕಿ ನಷ್ಟ ಹೊಂದಬೇಕಾದ ಪರಿಸ್ಥಿತಿ ಎದುರಾಗಿದೆ. ಸರ್ಕಾರ ರೈತರು ಬೆಳೆದ ಬೆಳೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ತುಂಬ ಅನಕೂಲವಾಗುತ್ತದೆ.●ಸಿ. ರಾಜಣ್ಣ ,
ವಿಠಲಾಪುರ ರೈತ