Advertisement
ಹಿಂದೆ ಹೆಚ್ಚು ಭೂಮಿಯಿತ್ತು. ಆಧುನಿಕ ಯಂತ್ರಗಳಿರಲಿಲ್ಲ, ಮನೆ ಮಂದಿಯೆಲ್ಲ. ಕೃಷಿ ಚಟುವಟಿಕೆಯಲ್ಲಿ ನಿರತರಾಗುತ್ತಿದ್ದರು. ಈಗ ಭೂಮಿ ಕಡಿಮೆ ಎಲ್ಲವೂ ಯಂತ್ರಮಯವಾಗಿದೆ. ಆದರೂ ರೈತ ಮಕ್ಕಳು ಕೃಷಿಯತ್ತ ಆಸಕ್ತಿ ತೋರುತ್ತಿಲ್ಲ. ರೈತರು ಬೆಳೆದ ಬೆಳೆಗೆ ಸರ್ಕಾರ ಬೆಂಬಲ ಕೊಡುತ್ತಿಲ್ಲ. ಬೆಳೆದ ಬೆಳೆಗೆ ಬೆಲೆಯಿಲ್ಲದಂತಾಗಿದೆ. ಇದರಿಂದಾಗಿ ರೈತರ ಬದುಕು ಕಷ್ಟಕರವಾಗಿದೆ. ಇತ್ತೀಚಿನ ದಿನಗಳಲ್ಲಿ ತಮ್ಮ ಮಗಳು ಕೃಷಿ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ರೈತ ಮಕ್ಕಳಿಗೆ ಹೆಣ್ಣು ಕೊಡುವವರ ಸಂಖ್ಯೆ ಗಣನೀಯ ವಾಗಿ ಕಡಿಮೆಯಾಗುತ್ತಿದೆ ಎಂದು ಪ್ರಗತಿಪರ ರೈತ ರಂಗಸ್ವಾಮಯ್ಯ ಬೇಸರ ವ್ಯಕ್ತಪಡಿಸಿದರು.
Related Articles
Advertisement
ಬಿತ್ತನೆ ಗುರಿ: 2019-20ನೇ ಸಾಲಿಗೆ 5 ಹೋಬಳಿ ಸೇರಿದಂತೆ ಒಟ್ಟು 4,524 ಹೆಕ್ಟೇರ್‌ನಷ್ಟು ಮುಂಗಾರು ತೊಗರಿ, ಅವರೆ, ಅಲಸಂಧೆ, ನೆಲಗಡಲೆ ಸೇರಿದಂತೆ ದ್ವಿದಳ ಧಾನ್ಯ ಬಿತ್ತನೆಯಾಗಬೇಕಿತ್ತು. ಆದರೆ ಕೇವಲ 176 ಹೆಕ್ಟೇರ್ ಮಾತ್ರ ಇಲ್ಲಿವರೆಗೆ ಬಿತ್ತನೆಯಾಗಿದೆ. ಮುಂಗಾರು ಮಳೆ ಕೊರತೆಯೇ ಪ್ರಮುಖ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಆಧುನಿಕ ಯಂತ್ರಗಳು: ತಂತ್ರಜ್ಞಾನ ಮುಂದುವರೆ ದಂತೆಲ್ಲ. ಆಧುನಿಕ ಕೃಷಿ ಯಂತ್ರಗಳ ಭರಾಟೆ ಜೋರಾ ಗಿದೆ. ಬಹುತೇಕ ಪೂರ್ವಿಕರು ದನಗಳ ಸಹಾಯದಿಂದ ಕೃಷಿ ಚುಟುವಟಿಕೆ ಆರಂಭಿಸುತ್ತಿದ್ದರು. ತಂತ್ರಜ್ಞಾನ ಮುಂದುವರೆದಂತೆಲ್ಲ ಆಧುನಿಕ ಯಂತ್ರಗಳ ಖರೀದಿ ಯಲ್ಲಿ ರೈತರು ಹೆಚ್ಚು ಆಸಕ್ತಿ ತೋರಿದ್ದಾರೆ. ಉಳಿಮೆ ಯಿಂದ ಹಿಡಿದು, ಕಳೆ ತೆಗೆಯುವುದು, ಔಷಧ ಸಿಂಪಡಣೆ, ಕಟಾವು, ಹೊಕ್ಕಾಣೆ, ನೀರಾವರಿಯಲ್ಲಿ ಸ್ಪ್ರಿಂಕ್ಲರ್ ಬಳಕೆ, ಹೀಗೆ ರೈತರು ಆಧುನಿಕ ಕೃಷಿ ಪದ್ಧತಿ ಯನ್ನು ಅಳವಡಿಸಿಕೊಂಡಿದ್ದಾರೆ. ಆದರೂ ಇನ್ನೂ ಸಹ ಪೂರ್ವಿಕರ ಕೃಷಿ ಚಟುವಟಿಕೆ ಪದ್ಧತಿ ಯನ್ನು ಈಗಲೂ ಕೆಲ ರೈತರು ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಅಧುನಿಕ ತಂತ್ರಜ್ಞಾನ ಕೃಷಿ ಪದ್ಧತಿ: ಆಧುನಿಕ ತಂತ್ರ ಜ್ಞಾನದ ಕೃಷಿ ಪದ್ಧತಿಯಿಂದ ಸಮಯ ಉಳಿತಾ ಯದ ಜೊತೆಗೆ ಕೂಲಿ ಆಳುಗಳ ಉಳಿತಾಯವೂ ಆಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಶಿಕ್ಷಣದತ್ತ ಹೆಚ್ಚು ಆಸಕ್ತಿ ತೋರುತ್ತಿದ್ದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಆಧುನಿಕ ಯಂತ್ರಗಳ ಬಳಕೆಯೇ ಕೃಷಿ ಚಟುವಟಿಕೆಯಲ್ಲಿ ಪ್ರಧಾನವಾಗಿದೆ. ಅಧುನಿಕ ಯಂತ್ರಗಳು ಈಗ ರೈತರ ಮಿತ್ರಗಳಾಗಿವೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.
ರಿಯಾಯಿತಿ ದರದಲ್ಲಿ ರೈತರಿಗೆ ಬಿತ್ತನೆ ಬೀಜತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಕೃಷಿ ಇಲಾಖೆಯಲ್ಲಿ ಈಗಾಗಲೇ ರಾಗಿ, ತೊಗರಿ, ಅಲಸಂಧೆ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ರಾಗಿ-151.80 ಕ್ವಿಂಟಾಲ್, ಬಿಆರ್‌ಜಿ-1 ತಳಿಯ ತೊಗರಿ -43 ಕ್ವಿಂಟಾಲ್, ಬಿಆರ್‌ಜಿ-5 ತಳಿಯ ತೊಗರಿ 1.20 ಕ್ವಿಂಟಾಲ್ ಮತ್ತು ಅಲಸಂಧೆ-15.60 ಕ್ವಿಂಟಾಲ್ ದಾಸ್ತಾನು ಮಾಡಲಾಗಿದೆ. ಮುಂಗಾರು ಹಂಗಾಮಿನಲ್ಲಿ ಅಷ್ಟಾಗಿ ಭತ್ತ ಬಿತ್ತನೆ ಮಾಡದ ಕಾರಣ ದಾಸ್ತಾನು ಮಾಡಲಾಗಿಲ್ಲ. ಜೂನ್ 10 ರ ನಂತರ ಭತ್ತ ದಾಸ್ತಾನು ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್ ಮಾಹಿತಿ ನೀಡಿದ್ದಾರೆ.