ಮಂಡ್ಯ: ಜಿಲ್ಲೆಯ ಜೀವನಾಡಿ ರೈತರ ಆರ್ಥಿಕ ಚಟುವಟಿಕೆಗೆದಾರಿಯಾಗಿದ್ದ ಮೈಷುಗರ್ ಕಾರ್ಖಾನೆಯ ಚಕ್ರಗಳು ಈವರ್ಷವೂ ತಿರುಗುವಂತೆ ಕಾಣುತ್ತಿಲ್ಲ. ಕೊರೊನಾಕಾರಣದಿಂದ ಸರ್ಕಾರ ಕಾರ್ಖಾನೆಯನ್ನು ಮರೆತಂತಿದೆ.ಮೈಷುಗರ್ ಕಾರ್ಖಾನೆ ವ್ಯಾಪ್ತಿಯಲ್ಲಿ ಈಗಾಗಲೇಸುಮಾರು 7ಲಕ್ಷಕ್ಕೂ ಹೆಚ್ಚು ಕಬ್ಬು ಬಂದಿದೆ.
ಈಗಾಗಲೇ 11ತಿಂಗಳ ಕಬ್ಬು ಕಟಾವಿಗೆ ಬಂದಿದೆ. ಆದರೆ, ಇನ್ನೂ ಕಾರ್ಖಾನೆಆರಂಭವಾಗದಿರುವುದರಿಂದ ರೈತರು ಗೊಂದಲಕ್ಕೆಒಳಗಾಗಿದ್ದಾರೆ.ಕಾರ್ಖಾನೆಯನ್ನು ಪಾಂಡವಪುರ ಪಿಎಸ್‌ಎಸ್‌ಕೆಕಾರ್ಖಾನೆಯಂತೆ ಖಾಸಗಿಯವರಿಗೆ 40 ವರ್ಷ ಗುತ್ತಿಗೆನೀಡಲು ಟೆಂಡರ್ ಕರೆಯುವಂತೆ ಸರ್ಕಾರ ಆದೇಶಿಸಿತ್ತು.ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ಅಷ್ಟರೊಳಗೆ ಕೊರೊನಾ 2ನೇ ಅಲೆಯಿಂದ ಸ್ಥಗಿತಗೊಂಡಿತು. ಆದರೆಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ.ಈ ವರ್ಷವೂ ರೈತರಿಗೆ ಸಂಕಷ್ಟ: ಸ್ಥಗಿತಗೊಂಡಾಗಿನಿಂದಕಾರ್ಖಾನೆ ವ್ಯಾಪ್ತಿಯ ರೈತರು ಸಂಕಷ್ಟ ಅನುಭವಿಸುತ್ತಲೇ ಇದ್ದಾರೆ. ಬೇರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಿದ್ದರೂಸಾಗಾಣಿಕೆ ವೆಚ್ಚ, ಕಬ್ಬಿನ ದರ ಸಿಗುತ್ತಿಲ್ಲ. ಇದರಿಂದ ರೈತರುನಷ್ಟ ಅನುಭವಿಸುತ್ತಲೇ ಇದ್ದಾರೆ. ಈ ವರ್ಷವೂ ಮುಂದುವರೆಯಲಿದೆ.
ಈಗಾಗಲೇ ಹೋರಾಟಗಾರರು ಕಾರ್ಖಾನೆಯನ್ನುಸರ್ಕಾರವೇ ನಡೆಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮತ್ತೆಕೆಲವರು ಓ ಅಂಡ್ ಎಂ ಮೂಲಕ ಆರಂಭಿಸಬೇಕು. ಆದರೆಯಾವುದೇ ಕಾರಣಕ್ಕೂ 40 ವರ್ಷ ಗುತ್ತಿಗೆ ನೀಡಬಾರದುಎಂದು ಆಗ್ರಹಿಸುತ್ತಿದ್ದಾರೆ. ಕೊರೊನಾ ಲಾಕ್‌ಡೌನ್ ಬಳಿಕಗುತ್ತಿಗೆ ನೀಡುವ ಟೆಂಡರ್ ಕಾರ್ಯ ಮುಂದುವರಿಯುವಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಎಚ್.ಶಿವರಾಜು