Advertisement

ದೂರದೃಷ್ಟಿಯ ನಾಯಕ ಜಿ.ಮಾದೇಗೌಡರು

07:51 PM Jul 25, 2021 | Team Udayavani |

ಮಂಡ್ಯ: ದೂರದೃಷ್ಟಿಯ ನಾಯಕರಾಗಿದ್ದ ಜಿ.ಮಾದೇಗೌಡರು ಸಮಷ್ಠಿ ಪ್ರಜ್ಞೆಯಲ್ಲಿ ಕೈಗೊಂಡಕೆಲಸ ಕಾರ್ಯ ಪೂರ್ಣಗೊಳಿಸುವಹಾದಿಯಲ್ಲಿ ಸಾಗುವ ಮೂಲಕ ನಾವು ನಿಜಅರ್ಥದಲ್ಲಿ ಅವರಿಗೆ ಗೌರವ ಸಲ್ಲಿಸಬಹುದುಎಂದು ವಿವಿಧ ಸಂಘಟನೆಗಳ ಮುಖಂಡರುಜಿ.ಮಾದೇಗೌಡರ ಬಗ್ಗೆ ತಮ್ಮ ಅಭಿಪ್ರಾಯವ್ಯಕ್ತಪಡಿಸಿದರು.

Advertisement

ನಗರದ ಗಾಂಧಿ ಭವನದಲ್ಲಿ ಜಿಲ್ಲಾ ರೈತಹಿತರಕ್ಷಣಾ ಸಮಿತಿ ವತಿಯಿಂದ ವಿವಿಧಸಂಘಟನೆಗಳ ವತಿಯಿಂದ ನಡೆದ ಶ್ರದ್ಧಾಂಜಲಿಸಭೆಯಲ್ಲಿ ಜಿ.ಮಾದೇಗೌಡರ ಭಾವಚಿತ್ರಕ್ಕೆಪುಷ್ಪಾರ್ಚನೆ ಸಲ್ಲಿಸಲಾಯಿತು.ಚಾಪು ಮೂಡಿಸಿದ ವ್ಯಕ್ತಿತ್ವ: ವಿಧಾನ ಪರಿಷತ್‌ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ,ಮಂಡ್ಯದ ರಾಜಕೀಯ, ಸಾಮಾಜಿಕ,ಹೋರಾಟ, ಶೈಕ್ಷಣಿಕ ಪರಂಪರೆಯಲ್ಲಿ ಜಿ.ಮಾದೇ ಗೌಡರು ಪ್ರಮುಖವಾಗಿ ಕಂಡುಬರುತ್ತಾರೆ.

ಕೆ.ವಿ.ಶಂಕರಗೌಡ, ಎಚ್‌.ಡಿ.ಚೌಡಯ್ಯ ಅವರ ಸಮಕಾಲೀನರಾಗಿ ರಾಜಕಾರಣದಲ್ಲಿ ತಮ್ಮದೇ ಆದ ಚಾಪು ಮೂಡಿಸಿದವ್ಯಕ್ತಿತ್ವ ಅವರದು. ಕೆ.ವಿ.ಶಂಕರಗೌಡರು ಒಂದುಟೀಕೆಗೆ ಅಂಜಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದರೆ, ಜಿ.ಮಾದೇಗೌಡರುಕಾವೇರಿ ವಿಚಾರದಲ್ಲಿ ರಾಜಿಯಾಗದೇ ರಾಜೀನಾಮೆ ಕೊಟ್ಟು ಬಂದವರು. ಹಾಗೇ ಬಂದವರುಸುಮ್ಮನೆ ಕೂರಲಿಲ್ಲ. ಬದಲಿಗೆ ಮಹಾತ್ಮ ಗಾಂಧಿಟ್ರಸ್ಟ್‌ ಸ್ಥಾಪಿಸಿ ಅನೇಕ ರಚನಾತ್ಮಕ ಚಟುವಟಿಕೆಕೈಗೊಂಡಿದ್ದಾರೆ.

ಅದರಲ್ಲಿ ಗಾಂಧಿ ಭವನಹಾಗೂ ಮಲ್ಲಿಗೆರೆಯ ಗಾಂಧಿ ಗ್ರಾಮ ಪ್ರಮುಖ ವಾಗಿದ್ದು, ಇವು ಮುಂದಿನ ಜನಾಂಗವನ್ನುಗಾಂ ಧಿ ವಿಚಾರಧಾರೆಗಳತ್ತ ಸೆಳೆಯುವ ಒಂದುಪ್ರಯತ್ನವಾಗಿದೆ ಎಂದು ಸ್ಮರಿಸಿದರು.ಪೊ›.ಎಚ್‌.ಎಸ್‌.ಮುದ್ದೇಗೌಡ ಮಾತನಾಡಿ,ಮಂಡ್ಯದಲ್ಲಿ ಕೆ.ವಿ.ಶಂಕರಗೌಡ,ಜಿ.ಮಾದೇಗೌಡ ಹಾಗೂ ಎಚ್‌.ಡಿ.ಚೌಡಯ್ಯಅವರು ಮುತ್ಸದ್ಧಿತನ ಮೈಗೂಡಿಸಿಕೊಂಡವಿಶಿಷ್ಟ ವ್ಯಕ್ತಿಗಳಾಗಿದ್ದಾರೆ.

ಒಬ್ಬ ವ್ಯಕ್ತಿಯಲ್ಲಿರುವವಿಶೇಷ ಗುಣವನ್ನು ಪತ್ತೆ ಹಚ್ಚುವ ವಿಶೇಷತೆಅವರಿಗಿತ್ತು. ಮಂಡ್ಯದಲ್ಲಿ ನಡೆದ ಸಾಹಿತ್ಯಸಮ್ಮೇಳನವನ್ನು ಯಶಸ್ವಿಯಾಗಿಸಿದ ಕೀರ್ತಿಯೂ ಅವರಿಗೇ ಸಲ್ಲಬೇಕು. ಆ ಸಮ್ಮೇಳನದಲ್ಲಿಉಳಿದ ಹಣದಲ್ಲಿ ಒಂದು ಭಾಗವನ್ನು ಕಸಾಪಭವನಕ್ಕೆ ಕೊಟ್ಟು, ಮತ್ತೂಂದು ಭಾಗವನ್ನು ತಮ್ಮಎದುರಾಳಿಯಾಗಿದ್ದ ಎಚ್‌.ಎಲ್‌.ನಾಗೇಗೌಡರಜನಪದ ಕಲಾ ಲೋಕಕ್ಕೆ ನೀಡಿದ್ದರು. ಇದುಅವರಲ್ಲಿದ್ದ ಶ್ರೇಷ್ಠ ಗುಣ ಎಂದು ಬಣ್ಣಿಸಿದರು.ಸಭೆಯಲ್ಲಿ ಸುನಂದಾ ಜಯರಾಂ,ಎಂ.ಬಿ.ಶ್ರೀನಿವಾಸ್‌, ಗುರುಪ್ರಸಾದ್‌ಕೆರಗೋಡು, ಸಿ.ಕುಮಾರಿ, ಮಾಯಿಗೌಡ,ಸಿ.ಪುಟ್ಟಮಾದು, ಮಂಜುನಾಥ್‌, ಎಸ್‌.ಕೃಷ್ಣ,ಕೆ.ಬೋರಯ್ಯ, ಬಿ.ಟಿ.ವಿಶ್ವನಾಥ್‌, ತಗ್ಗಹಳ್ಳಿವೆಂಕಟೇಶ್‌ ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next