ಮದ್ದೂರು: ಇಹಲೋಕ ತ್ಯಜಿಸಿದ ಹಿರಿಯ ಮುತ್ಸದ್ಧಿ, ಮಾಜಿಸಂಸದ ಜಿ. ಮಾದೇಗೌಡ ಅವರ ಪಾರ್ಥೀವ ಶರೀರದಅಂತಿಮ ದರ್ಶನ ಪಡೆದ ಸುತ್ತೂರು ದೇಶಿ ಕೇಂದ್ರ ಶ್ರೀಗಳುಗೌಡರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.
ಮದ್ದೂರು ಪಟ್ಟಣದ ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯ ಎಚ್.ಕೆ.ವೀರಣ್ಣಗೌಡ ಕಾಲೇಜು ಹೊರ ಆವರಣದಲ್ಲಿಜಿ.ಮಾದೇಗೌಡರಪಾರ್ಥೀವಶರೀರಕ್ಕೆಪುಷ್ಪಗುಚ್ಚವಿರಿಸಿಅಂತಿಮ ದರ್ಶನ ಪಡೆದ ಶ್ರೀಗಳು ಮಾದೇಗೌಡರ ಜನಸೇವೆಯನ್ನು ಬಣ್ಣಿಸಿದರು.
ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಗೌರವಾಧ್ಯಕ್ಷ ಕೆ.ಟಿ. ಚಂದು, ಕಾರ್ಯದರ್ಶಿ ಸಿ. ಅಪೂರ್ವಚಂದ್ರ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು,ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಈ ವೇಳೆ ಹಾಜರಿದ್ದರು.ಈ ಮುನ್ನ ಮಂಡ್ಯದ ಬಂದೀಗೌಡ ಬಡಾವಣೆ ನಿವಾಸದಿಂದ ಹೊರಟ ಪಾರ್ಥೀವ ಶರೀರವಿದ್ದ ಅಲಂಕೃತ ವಾಹನಮೈಸೂರು, ಬೆಂಗಳೂರು ಹೆದ್ದಾರಿ ಹನಕೆರೆ ಮಾರ್ಗವಾಗಿಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆಸ್ಥಳೀಯರು ರೈತ ಸಂಘದ ಕಾರ್ಯಕರ್ತರು, ಮನ್‌ಮುಲ್‌ಆಡಳಿತ ಮಂಡಳಿ ಅಧಿಕಾರಿ ವರ್ಗ ಅಂತಿಮ ದರ್ಶನಪಡೆದರು.
ಮದ್ದೂರು ಪ್ರವಾಸಿ ಮಂದಿರ ವೃತ್ತ, ಗೊರವನಹಳ್ಳಿ ಅಡ್ಡರಸ್ತೆ, ಹುಲಿಗೆರೆಪುರ, ಬೋರಾಪುರ, ಉಪ್ಪಿನಕೆರೆಗೇಟ್ ಸೇರಿ ದಂತೆ ವಿವಿಧೆಡೆ ನೆರೆದಿದ್ದ ನೂರಾರು ಮಂದಿ ಜಿ.ಮಾದೇಗೌಡರ ಪಾರ್ಥಿವ ಶರೀರದ ದರ್ಶನ ಪಡೆದುಅಂತಿಮ ನಮನ ಸಲ್ಲಿಸಿದರು. ಬಳಿಕ ಮೃತ ಜಿ.ಮಾದೇಗೌಡರಸ್ವಗ್ರಾಮ ಗುರುದೇವರಹಳ್ಳಿಗೆ ತೆರಳಿದ ಪಾರ್ಥಿವ ಶರೀರವಿದ್ದವಾಹನ ಕೆಲವೊತ್ತು ಸ್ಥಳೀಯರ ದರ್ಶನದ ಬಳಿಕ ಸಿಎ ಕೆರೆಮಾರ್ಗವಾಗಿ ಭಾರತಿನಗರದ ವಿದ್ಯಾಸಂಸ್ಥೆಗೆ ತೆರಳಿತು.