Advertisement

ಪ್ರಕರಣ ಇತ್ಯರ್ಥದಿಂದ ಹಣ, ಸಮಯ ಉಳಿತಾಯ

08:55 PM Jul 16, 2021 | Team Udayavani |

ಮಂಡ್ಯ: ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವಪ್ರಕರಣಗಳನ್ನು ಶೀಘ್ರವಾಗಿ ಪರಿಹಾರಪಡೆದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಆ.14ರಂದು ಮೆಗಾ ಲೋಕಅದಾಲತ್‌ ಆಯೋಜಿಸಲಾಗಿದೆ ಎಂದು ಪ್ರಧಾನಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್‌.ಬಿ.ವಸ್ತ್ರದಮಠ ತಿಳಿಸಿದರು.

Advertisement

ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನುರಾಷ್ಟ್ರೀಯ ಲೋಕ ಅದಾಲತ್‌ ಮೂಲಕ ಶೀಘ್ರಬಗೆಹರಿಸಿಕೊಂಡು ಹಣ, ಸಮಯ ಉಳಿತಾಯದಜತೆಗೆ ನೆಮ್ಮದಿಯ ಜೀವನ ನಡೆಸಬಹುದಾಗಿದೆ ಎಂದು ಗುರುವಾರ ನಗರದ ಮಧ್ಯಸ್ಥಿಕೆ ಕೇಂದ್ರದ ಸಭಾಂಗಣದಲ್ಲಿಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಕರಣ ಇಳಿಕೆ ಸಾಧ್ಯತೆ: ಕೊರೊನಾ ತಡೆ ಕುರಿತುಸಾರ್ವಜನಿಕರಲ್ಲಿ ಅರಿವು ಮೂಡಿಸುವಕಾರ್ಯವನ್ನು ಕೂಡ ಕೈಗೊಳ್ಳಲಾಗಿದೆ.ಸಾರ್ವಜನಿಕರು ಅದಾಲತ್‌ ಮುಖಾಂತರ ತಮ್ಮಪ್ರಕರಣಗಳಿಗೆ ಪರಿಹಾರ ಕಂಡುಕೊಂಡಾಗ ಮಾತ್ರಪ್ರಕರಣಗಳ ಸಂಖ್ಯೆ ಇಳಿಕೆಯಾಗಲಿದೆ ಎಂದರು.ಸದ್ಬಳಕೆಗೆ ಸಲಹೆ: ಜಿಲ್ಲೆಯಲ್ಲಿ ಒಟ್ಟು 83,351ಪ್ರಕರಣಗಳಿದ್ದು, ಅದರಲ್ಲಿ 39484 ಸಿವಿಲ್‌,43,867 ಕ್ರಿಮಿನಲ್‌, 5076 ಮೋಟಾರ್‌ ವಾಹನ,13207 ಚೆಕ್‌ ಬೌನ್ಸ್‌, 1971 ರಾಜಿಆಗಬಹುದಾದಂಥ ಪ್ರಕರಣಗಳಿವೆ.ನ್ಯಾಯಾಲಯಗಳಲ್ಲಿ ಪ್ರಕರಣ ಇಳಿಕೆಯಾದಷ್ಟುಶಾಂತಿಯುತ ರಾಷ್ಟ್ರ ನಿರ್ಮಾಣವಾಗಬಲ್ಲದು.ಸಾರ್ವಜನಿಕರು ಅದಾಲತ್‌ ಪ್ರಯೋಜನಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ನ್ಯಾಯಾಲಯದಲ್ಲಿ ಬಾಕಿ ಇರುವಪ್ರಕರಣಗಳೆಂದರೆ, ರಾಜಿಯಾಗಬಲ್ಲ ಅಪರಾಧಿಕ,ಚೆಕ್‌ ಅಮಾನ್ಯ, ಆರ್ಥಿಕ ವಸೂಲಾತಿ, ಮೋಟಾರುಅಪಘಾತ ಪರಿಹಾರ ನ್ಯಾಯಾಧೀಕರಣ,ಉದ್ಯೋಗದಲ್ಲಿಪುನರ್‌ಸ್ಥಾಪಿಸಲ್ಪಡುವ,ಜಮೀನುವಿವಾದ, ಕಾರ್ಮಿಕ ವಿವಾದಗಳು ಹಾಗೂಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದಕ್ಷೇಮುಗಳು, ವಿದ್ಯುತ್‌ ಹಾಗೂ ನೀರಿನ ಶುಲ್ಕಗಳು,ವೈವಾಹಿಕಕುಟುಂಬ ನ್ಯಾಯಾಲಯದಲ್ಲಿ ಇತ್ಯರ್ಥಪಡೆಯಬಹುದು ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ08232-229345 ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರಗಳು ಅಥವಾ ತಾಲೂಕು ಕಾನೂನು ಸೇವಾಸಮಿತಿ ಸದಸ್ಯ ಕಾರ್ಯದರ್ಶಿಯವರನ್ನುಸಂಪರ್ಕಿಸಬಹುದು ಎಂದು ತಿಳಿಸಿದರು.ಗೋಷ್ಠಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದಸದಸ್ಯಕಾರ್ಯದರ್ಶಿ ನಳಿನಿಕುಮಾರಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next