ಮದ್ದೂರು: ರಾಜ್ಯಾದ್ಯಂತ ಸುದ್ದಿಯಲ್ಲಿರುವ ಅಕ್ರಮ ಗಣಿಗಾರಿಕೆ ಸದ್ದುಕೇವಲಪಾಂಡವಪುರ ಉಪ ವಿಭಾಗಕ್ಕೆ ಮಾತ್ರಸೀಮಿತವಾಗದೆ ಮಂಡ್ಯ ಉಪ ವಿಭಾಗದ ಎಲ್ಲೆಡೆಯಿದ್ದು, ಮದ್ದೂರುತಾಲೂಕಿನಲ್ಲೂ ನಿರಂತರ ಅಕ್ರಮ ಗಣಿಗಾರಿಕೆ ತಡೆಗೆ ಜಿಲ್ಲಾಡಳಿತಮುಂದಾಗ ಬೇಕೆಂದು ಜಿಲ್ಲಾ ಕಿಸಾನ್ ಕಾಂಗ್ರೆಸ್‌ಘಟಕದ ಅಧ್ಯಕ್ಷ ದೇಶಹಳ್ಳಿಆರ್. ಮೋಹನ್‌ಕುಮಾರ್‌ಆಗ್ರಹಿಸಿದ್ದಾರೆ.
ಇದಕ್ಕೆ ಉದಾಹರಣೆಎಂಬಂತೆ ಮದ್ದೂರುತಾಲೂಕಿನ ಚಂದಹಳ್ಳಿ ದೊಡ್ಡಿ ಗ್ರಾಮದಹೊರ ವಲಯದಲ್ಲಿ ಅಕ್ರಮವಾಗಿಗಣಿಗಾರಿಕೆ ಚಾಲ್ತಿಯಲ್ಲಿದ್ದು, ತಾಲೂಕುಆಡಳಿತ ಗಣಿ ಮತ್ತು ಭೂ ವಿಜ್ಞಾನಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸಿ ಪ್ರಾಕೃತಿಕ ಸಂಪತ್ತಿನಲೂಟಿಗೆ ಆಸರೆಯಾಗಿದ್ದಾರೆಂದುದೂರಿದ್ದಾರೆ.
ಮೈಸೂರು, ಬೆಂಗಳೂರು ಹೆದ್ದಾರಿನವೀಕರಣ ಕಾಮಗಾರಿ ಹೆಸರಿನಲ್ಲಿಹೆದ್ದಾರಿ ಗುತ್ತಿಗೆದಾರರು ಚಂದಹಳ್ಳಿದೊಡ್ಡಿ ಗ್ರಾಮದ ಸರ್ವೆ ನಂ ವ್ಯಾಪ್ತಿಯಜಮೀನಿನಲ್ಲಿ ನಿಯಮ ಬಾಹಿರವಾಗಿ70 ರಿಂದ 80 ಅಡಿ ಭೂಮಟ್ಟದಿಂದಆಳಕ್ಕೆ ಗಣಿಗಾರಿಕೆ ನಡೆಸಿ ಅಕ್ರಮವೆಸಗಿರುವುದಾಗಿ ಆರೋಪಿಸಿದ್ದಾರೆ.
ತಾಲೂಕುಮಟ್ಟದ ವಿವಿಧ ಇಲಾಖೆಅಧಿಕಾರಿಗಳು, ಜಿಲ್ಲಾಡಳಿತ ಮತ್ತು ಕೆಲ ಜನಪ್ರತಿನಿಧಿಗಳುಈ ಅಕ್ರಮ ಗಣಿ ಗಾರಿಕೆವಿಚಾರದಲ್ಲಿ ಶಾಮೀಲಾಗಿದ್ದು, ಸ್ಥಳೀಯ ರೈತರ ಬೆಳೆಹಾನಿ ಸೇರಿದಂತೆ ಗ್ರಾಮದರಸ್ತೆಗಳು ಹಾಳಾಗಿದ್ದು,ಸ್ಥಳೀಯರ ಮನೆಗಳ ಗೋಡೆಗಳು ಬಿರುಕು ಬಿಟ್ಟಿರುವುದು ಕಾಣಸಿಗುತ್ತಿದೆ ಎಂದು ಆರೋಪಿಸಿದ್ದಾರೆ.ಪ್ರಾಕೃತಿಕ ಸಂಪತ್ತಿನ ರಕ್ಷಣೆ ಜತೆಗೆಸ್ಥಳೀಯ ರಾಜಕಾರಣಿಗಳ, ಅಧಿಕಾರಿಗಳ ಶಾಮೀಲು ತಪ್ಪಿಸುವ ಜತೆಗೆಕಾನೂನು ಉಲ್ಲಂ ಸಿರುವ ಗುತ್ತಿಗೆದಾರರ ವಿರುದ್ಧ ರಾಜ್ಯ ಸರ್ಕಾರಜಿಲ್ಲಾಡಳಿತದ ಮೂಲಕ ಸೂಕ್ತ ಕ್ರಮವಹಿಸುವಂತೆ, ತಪ್ಪಿದಲ್ಲಿ ಸ್ಥಳೀಯರೊಡಗೂಡಿ ಪ್ರತಿಭಟನೆ ಹಮ್ಮಿಕೊಳ್ಳುವಎಚ್ಚರಿಕೆ ನೀಡಿದ್ದಾರೆ.