Advertisement

ದುಶ್ಚಟಗಳಿಂದ ಕುಟುಂಬದ ಮೇಲೆ ಪರಿಣಾಮ

10:10 PM Jun 27, 2021 | Team Udayavani |

ಮಂಡ್ಯ: ಮಾದಕ ದ್ರವ್ಯಗಳ ಸೇವನೆಯಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುವುದಲ್ಲದೆ, ಕುಟುಂಬದ ಮೇಲೂ ಪರಿಣಾಮಬೀರುತ್ತದೆ ಎಂದು ಬಿಜೆಪಿ ರಾಜ್ಯ ಪರಿಷತ್‌ಸದಸ್ಯ ಡಾ.ಸಿದ್ದರಾಮಯ್ಯ ಅಭಿಪ್ರಾಯಿಸಿದರು.

Advertisement

ಧ್ವನಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ನಗರದ ಧ್ವನಿ ಮದ್ಯವರ್ಜನ ಕೇಂದ್ರದ ಆವರಣದಲ್ಲಿ ನಡೆದ ವಿಶ್ವ ಮಾದಕವಸ್ತುಗಳ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮದ್ಯವರ್ಜನಕೇಂದ್ರಗಳಲ್ಲಿ ಚಿಕಿತ್ಸೆ ಪಡೆದು ಮನೆಗೆ ಹೋದ ಬಳಿಕ ಮತ್ತೆ ಮಾದಕ ವ್ಯಸನಕ್ಕೆ ದಾಸನಾದರೆಅದರಿಂದೇನೂ ಪ್ರಯೋಜನವಾಗುವುದಿಲ್ಲಎಂದರು.

ಕೊಕೇನ್‌, ಬ್ರೌನ್‌ಷುಗರ್‌,ಮದ್ಯ, ಗಾಂಜಾ, ಬೀಡಿ, ಸಿಗರೇಟು ಇತ್ಯಾದಿಗಳೆಲ್ಲವು ಮಾದಕ ವಸ್ತುಗಳೇ ಆಗಿವೆ.ಸಾಮಾನ್ಯವಾಗಿ ಒಂದಲ್ಲ ಒಂದು ಚಟವನ್ನು ಮೈಗೂಡಿಸಿಕೊಂಡವರೇ ಹೆಚ್ಚಾಗಿದ್ದಾರೆ. ಇಂಥ ಚಟಗಳಿಂದ ದೂರ ಇರಬೇಕು ಎಂದರು.

ನಿವೃತ್ತ ಡಿಎಚ್‌ಒ ಡಾ.ಸಿ.ಶಿವರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯೆ ಎಂ.ಎಸ್‌.ಪೂರ್ಣಿಮಾ,ಬಿಜೆಪಿ ಮುಖಂಡಕೆ. ನಾಗಣ್ಣಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next