Advertisement

ಹೈದರಾಬಾದಿನಲ್ಲಿ ಬಾಲಕರ ಲೈಂಗಿಕ ದುರ್ಬಳಕೆ: ಮದ್ರಸ ಶಿಕ್ಷಕ ಅರೆಸ್ಟ್‌

11:53 AM May 04, 2018 | Team Udayavani |

ಹೈದರಾಬಾದ್‌ : ಮದ್ರಸದ ಆರು ಮಂದಿ ಬಾಲಕರನ್ನು ತನ್ನ ಲೈಂಗಿಕ ತೃಷೆಗಾಗಿ ಅನೈಸರ್ಗಿಕವಾಗಿ ಬಳಸಿಕೊಂಡ ಆರೋಪದ ಮೇಲೆ 23ರ ಹರೆಯದ ಮದ್ರಸ ಶಿಕ್ಷಕ ರೆಹಾನ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 

Advertisement

ಮದ್ರಸ ಶಿಕ್ಷಕನಿಂದ ಕಳೆದ ಕೆಲವು ತಿಂಗಳಿಂದ ಲೈಂಗಿಕ ದುರ್ಬಳಕೆಗೆ ಗುರಿಯಾಗಿದ್ದ  ಬಾಲಕರು 10ರಿಂದ 12 ವರ್ಷ ಪ್ರಾಯದ ಒಳಗಿನವರಾಗಿದ್ದಾರೆ. 

ಮದ್ರಸ ಶಿಕ್ಷಕನ್ನು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾನೆಂದು ಕೆಲವು ಬಾಲಕರು ತಮ್ಮ ಮನೆಯಲ್ಲಿ ಹೇಳಿಕೊಂಡದ್ದನ್ನು ಅನುಸರಿಸಿ ಕಳೆದ ಎ.29ರಂದು  ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು. 

ಶಿಕ್ಷಕ ರೆಹಾನ್‌ ಮದ್ರಸದಲ್ಲಿ ಬಾಲಕರಿಗೆ ಅರೆಬಿಕ್‌ ಕಲಿಸುತ್ತಿದ್ದ. 

ಪೊಲೀಸರು ಆತನ ವಿರುದ್ಧ ಐಪಿಸಿ ಸೆ.377 (ಅಸಹಜ ಲೈಂಗಿಕ ಅಪರಾಧ) ಮತ್ತು ಪೋಕ್‌ಸೋ ಕಾಯಿದೆಯ ವಿವಿಧ ಸೆಕ್ಷನ್‌ಗಳಡಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

ನ್ಯಾಯಾಲಯ ಬಂಧಿತ ಮದ್ರಸ ಶಿಕ್ಷಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next