Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಹೈಪರ್‌ಲೂಪ್ ಪರೀಕ್ಷಾ ಟ್ರ್ಯಾಕನ್ನು ನಿರ್ಮಾಣ ಮಾಡಲಾಗಿದೆ. ಇದು 410 ಮೀ. ಉದ್ದವಿದೆ ಎಂದಿದ್ದಾರೆ. ಈ ರೈಲಿನ ಗರಿಷ್ಠ ವೇಗ ಗಂಟೆಗೆ 1,110 ಕಿ.ಮೀ. ಆಗಿದ್ದು, ಕಾರ್ಯಾಚರಣ ವೇಗ ಗಂಟೆಗೆ 360 ಕಿ.ಮೀ. ಇರಲಿದೆ.
ಹೈಪರ್‌ಲೂಪ್ ಅತ್ಯಂತ ವೇಗವಾಗಿ ಸಾರಿಗೆ ಒದಗಿಸುವ ವ್ಯವಸ್ಥೆಯಾಗಿದ್ದು, ಕಡಿಮೆ ಒತ್ತಡವಿರುವ ಪೈಪ್‌ನೊಳಗೆ ಮ್ಯಾಗ್ನೆಟಿಕ್ ತಂತ್ರಜ್ಞಾನ ಬಳಕೆ ಮಾಡಿಕೊಂಡು ಇದು ಚಲಿಸುತ್ತದೆ. ವಿಮಾನಕ್ಕಿಂತಲೂ ವೇಗವಾಗಿ ಇದು ಕಾರ್ಯನಿರ್ವಹಿಸಲಿದ್ದು, ಪೈಪ್‌ನೊಳಗೆ ಸಂಚರಿಸುವುದರಿಂದ ಅಡೆತಡೆಗಳಿಲ್ಲದೇ ಅತ್ಯಂತ ವೇಗವಾಗಿ ಇದು ಚಲಿಸುತ್ತದೆ. ಬೆಂಗಳೂರು ಮತ್ತು ಚೆನ್ನೈ ನಡುವೆ ಮೊದಲ ಹೈಪರ್‌ಲೂಪ್ ವ್ಯವಸ್ಥೆ ನಿರ್ಮಾಣ ಮಾಡಲು ಚಿಂತಿಸಲಾಗಿದೆ ಎಂದು ಕೇಂದ್ರ ಹೇಳಿತ್ತು.