Advertisement

ಸೆ.20ರ ವರೆಗೆ ತ.ನಾ.ವಿಶ್ವಾಸ ಮತ ಇಲ್ಲ : ಮದ್ರಾಸ್‌ ಹೈಕೋರ್ಟ್‌

04:03 PM Sep 14, 2017 | udayavani editorial |

ಚೆನ್ನೈ : ಸೆಪ್ಟಂಬರ್‌ 20ರ ವರೆಗೆ ತಮಿಳು ನಾಡು ವಿಧಾನಸಭೆಯಲ್ಲಿ ಸದನ ಬಲಾಬಲ ಪರೀಕ್ಷೆ ಇಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಇಂದು ಗುರುವಾರ ತೀರ್ಪು ನೀಡಿದೆ. 

Advertisement

ತಮಿಳು ನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಅವರ ಉಪ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರಿಗೆ ಮದ್ರಾಸ್‌ ಹೈಕೋರ್ಟಿನ ಈ ತೀರ್ಪಿನಿಂದಾಗಿ ಭಾರೀ ದೊಡ್ಡ ರಿಲೀಫ್ ಸಿಕ್ಕಿದಂತಾಗಿದೆ ಎಂದು ಸಿಎನ್‌ಎನ್‌ ನ್ಯೂಸ್‌ 18 ವರದಿ ಮಾಡಿದೆ. 

ಪಳನಿಸ್ವಾಮಿ ಅವರ ಸರಕಾರವನ್ನು ಹೇಗಾದರೂ ಉರುಳಿಸಬೇಕು ಎಂಬ ಹಠಕ್ಕೆ ಬಿದ್ದಿರುವ ಟಿಟಿವಿ ದಿನಕರನ್‌ ಗೆ ಮದ್ರಾಸ್‌ ಹೈಕೋರ್ಟಿನ ಈ ತೀರ್ಪಿನಿಂದಾಗಿ ಭಾರೀ ಹಿನ್ನಡೆ ಉಂಟಾಗಿದೆ. 

ದಿನಕರನ್‌ ನಿನ್ನೆ ಬುಧವಾರವಷ್ಟೇ ತಾನು ಡಿಎಂಕೆ ಜತೆಗೆ ಹೋಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಆ ಮೂಲಕ ಅವರು ಹಲವು ಊಹಾಪೋಹಗಳಿಗೆ ತೆರೆ ಎಳೆದಿದ್ದರು. ದಿನಕರನ್‌ ಅವರು ಪಳನಿಸ್ವಾಮಿ ಮತ್ತು ಓ ಪನ್ನೀರಸೆಲ್ವಂ ಅವರ ವಿಲಯನಗೊಂಡಿರುವ ಬಣದಿಂದ ಬೇರ್ಪಡುವರೆಂಬ ಊಹಾಪೋಹಗಳು ನಿನ್ನೆಯ ತನಕವೂ ದಟ್ಟವಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next