ಚೆನ್ನೈ: ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ನಳಿನಿ ಶ್ರೀಹರನ್ ಹಾಗೂ ರವಿಚಂದ್ರನ್ ಬಿಡುಗಡೆಗಾಗಿ ಸಲ್ಲಿಸಿದ್ದ ಮನವಿಗಳನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ.
ಇವರ ಮನವಿಗಳಿಗೆ ರಾಜ್ಯಪಾಲರ ಒಪ್ಪಿಗೆ ಸಿಕ್ಕಿದ್ದರೂ, ಶಿಕ್ಷೆಗೊಳಗಾಗಿರುವ ಅಪರಾಧಿಗಳನ್ನು ಬಿಡುಗಡೆ ಗೊಳಿಸುವ ಪರಮಾಧಿಕಾರ ಕೇವಲ ಸುಪ್ರೀಂ ಕೋರ್ಟ್‌ಗೆ ಮಾತ್ರವೇ ಇದೆ.
ಹೈಕೋರ್ಟ್‌ಗಳಿಗೆ ಇರುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಂ.ಎನ್. ಭಂಡಾರಿ ಹಾಗೂ ನ್ಯಾ. ಎನ್. ಮಾಲಾ ಅವರುಳ್ಳ ಪೀಠ ತಿಳಿಸಿದೆ.
ಇದನ್ನೂ ಓದಿ:2ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ತಡೆಯಲು ಕಾನೂನಿಗೆ ತಿದ್ದುಪಡಿ ತನ್ನಿ:ಕೇಂದ್ರಕ್ಕೆ ಆಯೋಗ
ಇದೇ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಎ.ಜಿ.ಪಿ ಪೆರಾರಿವಾಲನ್ ಅವರನ್ನು ಮೇ 18ರಂದು ಸುಪ್ರೀಂ ಕೋರ್ಟ್, ಸಂವಿಧಾನದ 142ನೇ ಕಲಂ ಅನ್ವಯ ತನಗೆ ನೀಡಲಾಗಿರುವ ಪರಮಾಧಿಕಾರವನ್ನು ಬಳಸಿ ಬಿಡುಗಡೆಗೊಳಿಸಿತ್ತು.
ಅದೇ ಆಧಾರದಲ್ಲಿ ತಮ್ಮನ್ನೂ ಬಿಡುಗಡೆ ಮಾಡಬೇಕೆಂದು ಕೋರಿ, ನಳಿನಿ ಹಾಗೂ ರವಿಚಂದ್ರನ್ ಅವರು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.