Advertisement

ಬಾಗಿಲು ತೆರೆದ ಎಐಎಡಿಎಂಕೆ ಕಚೇರಿ

09:52 PM Jul 21, 2022 | Team Udayavani |

ಚೆನ್ನೈ: ಪಕ್ಷದ ನಡುವಿನ ಎರಡು ಬಣಗಳ ಕಿತ್ತಾಟದ ಕಾರಣ ಸೀಲ್‌ ಮಾಡಲಾಗಿದ್ದ ಎಐಎಡಿಎಂಕೆ ಕಚೇರಿಯನ್ನು ಗುರುವಾರ ಬಾಗಿಲು ತೆರೆಯಲಾಗಿದೆ.

Advertisement

ತಮಿಳುನಾಡಿನ ಚೆನ್ನೈನಲ್ಲಿನಲ್ಲಿದ್ದ ಕಚೇರಿಯನ್ನು ಕಂದಾಯ ಅಧಿಕಾರಿಗಳು ಜು.11ರಂದು ಸೀಲ್‌ ಮಾಡಿದ್ದರು. ಕೆ.ಪಳನಿಸ್ವಾಮಿ ಮತ್ತು ಒ.ಪನ್ನೀರಸೆಲ್ವಂ ನಡುವೆ ಅಧಿಕಾರದ ವಿಚಾರದಲ್ಲಿ ಕಿತ್ತಾಟ ನಡೆದಿತ್ತು. ಆ ಹಿನ್ನೆಲೆ ಕಂದಾಯ ಅಧಿಕಾರಿಗಳು ಕಚೇರಿಯನ್ನು ಸೀಲ್‌ ಮಾಡಿದ್ದರು.

ಕಚೇರಿಯ ಬಾಗಿಲನ್ನು ತೆರೆಯುವಂತೆ ಕಂದಾಯ ಅಧಿಕಾರಿಗಳಿಗೆ ಮದ್ರಾಸ್‌ ಹೈ ಕೋರ್ಟ್‌ ಬುಧವಾರ ಆದೇಶಿಸಿತ್ತು.

ಗುರುವಾರ ಪಕ್ಷದ ಮುಖ್ಯಸ್ಥರು ಮತ್ತು ಪೊಲೀಸರ ಸಮ್ಮುಖದಲ್ಲಿ ಸೀಲ್‌ ತೆಗೆದುಹಾಕಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next