Advertisement

ಕಾಮಗಾರಿ ಪರಿಶೀಲಿಸಿದ ಮಡೋಳಪ್ಪ

12:43 PM Nov 30, 2021 | Team Udayavani |

ರಾಯಚೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರಾಯಚೂರು ತಾಲೂಕಿನಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಸ್ಥಳಕ್ಕೆ ಜಿಪಂ ಯೋಜನಾ ನಿರ್ದೇಶಕ ಮಡೋಳಪ್ಪ ಪಿ.ಎಸ್‌. ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

Advertisement

ತಾಲೂಕಿನ ಶಾಖವಾದಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಘನ ತ್ಯಾಜ್ಯ ವಿಲೇವಾರಿ ಘಟಕ, ಪ್ರಗತಿ ಹಂತದಲ್ಲಿರುವ ಗೋದಾಮು ನಿರ್ಮಾಣ, ಗ್ರಾಮೀಣ ಉದ್ಯಾನವನ, ಕೆರೆ ಅಭಿವೃದ್ಧಿ, ಜಾನುವಾರುಗಳ ಕುಡಿವ ನೀರಿನ ತೊಟ್ಟಿ ಮತ್ತು ಗ್ರಾಪಂ ಕಚೇರಿಗೆ ತೆರಳಿ ಯೋಜನೆ ಬಗ್ಗೆ ಪಂಚಾಯತಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಕಡತ ಪರಿಶೀಲಿಸಿದರು.

ತದನಂತರ ಸಂಗಮಕುಂಟ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಇಬ್ರಾಹಿಂ ದೊಡ್ಡಿ, ಯರ್ರಗುಂಟ ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ, ಮೆಟಲ್‌ ರಸ್ತೆ, ಹೈಟೆಕ್‌ ಶೌಚಾಲಯ, ಅಡುಗೆ ಕೊಣೆ ಕಾಮಗಾರಿ ವೀಕ್ಷಿಸಿದರು. ಅದರಲ್ಲಿ ಸಂಗ್ರಹವಾದ ಮಕ್ಕಳ ಆಹಾರ ದವಸ ಧಾನ್ಯಗಳ ಗುಣಮಟ್ಟ ಪರಿಶೀಲಿಸಿದರು. ಯಾವುದೇ ಲೋಪದೋಷಗಳು ನಡೆಯದಂತೆ ಎಲ್ಲ ಕಾಮಗಾರಿಗಳನ್ನು ಗುಣಮಟ್ಟದಿಂದ ನಿರ್ಮಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ತಾಪಂ ಇಒ, ಪಿಡಿಒಗಳು, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಗ್ರಾಪಂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next