ವಿಧಾನಸಭೆ: ಜೆಡಿಎಸ್‌ನ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಪಕ್ಷದಿಂದ ಅಮಾನತುಗೊಂಡು ಕಾಂಗ್ರೆಸ್‌ನತ್ತ ಮುಖ ಮಾಡಿರುವ ಶಾಸಕರಾದ ಜಮೀರ್ ಅಹಮದ್ ಮತ್ತು ಮಾಗಡಿ ಬಾಲಕೃಷ್ಣ ಬುಧವಾರ ಮೊಗಸಾಲೆಯಲ್ಲಿ ಆತ್ಮೀಯವಾಗಿ ಕುಶಲೋಪರಿಯಲ್ಲಿ ತೊಡಗಿದ್ದು ಗಮನ ಸೆಳೆಯಿತು.
ಎಚ್.ಡಿ.ರೇವಣ್ಣ , ಜಮೀರ್‌ಅಹಮದ್, ಮಾಗಡಿ ಬಾಲಕೃಷ್ಣ ಕೆಲಹೊತ್ತು ಪ್ರಸಕ್ತ ರಾಜ್ಯ ರಾಜಕೀಯ, ಉತ್ತರಪ್ರದೇಶ, ತಮಿಳುನಾಡು ಸೇರಿ ರಾಷ್ಟ್ರ ರಾಜಕೀಯದ ಬಗ್ಗೆ ಮಾತನಾಡುತ್ತಾ ತಮಾಷೆಯಲ್ಲಿ ತೊಡಗಿದ್ದರು. ಅಪರೂಪ ಎಂಬಂತೆ ಮೊಗಸಾಲೆಗೆ ಆಗಮಿಸಿದ್ದ ಎಚ್.ಡಿ.ರೇವಣ್ಣ ಸೋಫಾ ಮೇಲೆ ಕುಳಿತಿದ್ದಾಗ ಆಗಮಿಸಿದ ಜಮೀರ್‌ಅಹಮದ್, ಓ ಅಣ್ಣಾ ಹೇಗಿದ್ದೀರಿ ಎಂದರು.
ಅದಕ್ಕೆ, ಬಾರಪ್ಪಾ ಜಮೀರ್ ಎಂದು ರೇವಣ್ಣ ಪಕ್ಕದಲ್ಲಿ ಕುಳ್ಳರಿಸಿಕೊಂಡರು. ಈ ಸಂದರ್ಭದಲ್ಲಿ ಜಮೀರ್ ಅಹಮದ್ , ಹೀ ಈಸ್ ಅವರ್ ಟ್ರೂ ಲೀಡರ್ ಎಂದು ರೇವಣ್ಣ ಅವರಿಗೆ ಶಹಬ್ಟಾಸ್‌ಗಿರಿಕೊಟ್ಟರು. ಅದಕ್ಕೆ ರೇವಣ್ಣ ಆಯ್ತು ಬಾರಣ್ಣ, ರಾಜಕೀಯ ಬೇರೆ, ವಿಶ್ವಾಸ ಬೇರೆ ಎಂದರು.
ಹಿಂದೆಯೇ ಮಾಗಡಿ ಬಾಲಕೃಷ್ಣ ಬಂದರು. ಆಗ, ರೇವಣ್ಣ, ಏನಣ್ಣಾ ಅರೆಸ್ಟ್ ಆಯ್ತಿಯಾ ಅಂತ ಹೇಳ್ತಿದ್ರು ಬಿಡಿಸಿಕೊಂಡು ಬರೋಕೆ ನಾವು ಬರೋವ ಅಂತ ಇದ್ವಿ ಎಂದು ತಮಾಷೆ ಮಾಡಿದರು. ಅದನ್ನು ತಮಾಷೆಯಾಗಿಯೇ ಸ್ವೀಕರಿಸಿದ ಬಾಲಕೃಷ್ಣ, ಅರೆಸ್ಟ್ ಮಾಡೊÕàರು, ನೀವೆಯಾ, ಜಾಮೀನು ಕೊಡ್ರೋರು ನೀವೆಯಾ ಎಂದು ಚಟಾಕಿ ಹಾರಿಸಿದರು.
ನಂತರ ಏನೋ, ಮಾಗಡಿ ಕ್ಷೇತ್ರಕ್ಕೆ ಯಾರೋ ಅಭ್ಯರ್ಥಿಗೆ ಆಫರ್ ಮಾಡಿದ್ದೀಯಂತೆ ಎಂದು ಕೇಳಿದರು. ಅಯ್ಯೋ, ನಾನ್ಯಾಕೆ ಆಫರ್ ಕೊಡಲಿ, ಅವರ ಮುಖಾನೇ ನೋಡಿಲ್ಲ. ಪಾಪ, ಎಂ.ಪಿ.ಪ್ರಕಾಶ್ ಮಗ ಕೆಎಂಎಫ್ ಅಧ್ಯಕ್ಷ ಆಗಲಿ ಬಿಡಿ, ಅವಿಶ್ವಾಸ ತಾರಪ್ಪಾ ನಾನಂತೂ ಸೈನ್ ಹಾಕಿಕೊಡ್ತೇನೆ ಎಂದು ಹೇಳಿದ್ದೀನಿ ಎಂದು ಕೆಎಂಎಫ್ ಅಧ್ಯಕ್ಷ ಸ್ಥಾನ ಜಟಾಪಟಿ ಪ್ರಸ್ತಾಪಿಸಿದರು. ಹೌದಾ, ಎಂದು ಬಾಲಕೃಷ್ಣ ಸುಮ್ಮನಾದರು.
ಇದೇ ಸಂದರ್ಭದಲ್ಲಿ ಮೊಗಸಾಲೆಯ ಸ್ಟಾರ್ ಹೋಟೆಲ್ ಊಟ-ತಿಂಡಿ ವ್ಯವಸ್ಥೆ ಕುರಿತು ಮಾಧ್ಯಮದವರ ಬಳಿ ಪ್ರಸ್ತಾಪಿಸಿದ ಎಚ್.ಡಿ.ರೇವಣ್ಣ ,” ಏನ್ಸಾ ಸಾರ್, ಇಲ್ಲಿ ಈಗ ಫೈವ್ ಸ್ಟಾರ್ ಹೋಟೆಲ್ ಫುಡ್ಡಂತೆ ಹೆಂಗೈತೆ’ ಎಲ್ಲಾ ಚೆನ್ನಾಗೈತಾ, ಪೇಪರ್‌ನಲ್ಲೆಲ್ಲಾ ಬಂದಿತ್ತು ಎಂದು ಶುಗರ್‌ಲೆಸ್ ಹಾರ್ಲಿಕ್ಸ್, ಅರ್ದ ಉಪ್ಪಿಟ್ಟು ತಿಂದು ರುಚಿ ನೋಡಿದರು.
ಜಮೀರ್‌ಅಹಮದ್, ಎಚ್.ಡಿ.ರೇವಣ್ಣ, ಮಾಗಡಿ ಬಾಲಕೃಷ್ಣ ಅವರು ಒಟ್ಟಿಗೆ ಕುಳಿತು ಮಾತನಾಡುತ್ತಿರುವುದನ್ನು ಕಂಡ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು , ಏನಪ್ಪಾ ಇದು ಎಂದು ಉದ್ಗಾರ ತೆಗೆದಾಗ, ರೇವಣ್ಣ ಏನಿಲ್ಲಾ ಎಲ್ಲಾ ಫ್ರೆಂಡ್ಸ್ ಅಲ್ವಾ ಎಂದರು. ನಂತರ ಜಮೀರ್ ಅಹಮದ್, ಸ್ವಲ್ಪ ಕೆಲ್ಸ ಇದೆ ರೇವಣ್ಣ ಬರಿ¤àನಿ ಎಂದು ಹೇಳಿ ಬಾಲಕೃಷ್ಣ ಅವರೊಂದಿಗೆ ನಿರ್ಗಮಿಸಿದರು.