Advertisement

Madikeri ತಡಿಯಂಡಮೋಳ್‌: ಪ್ರವಾಸಿ ಯುವಕ ಹೃದಯಘಾತದಿಂದ ಸಾವು

11:25 PM Dec 25, 2023 | Team Udayavani |

ಮಡಿಕೇರಿ: ತಡಿಯಂಡಮೋಳ್‌ ಬೆಟ್ಟವನ್ನೇರಲು ಆಗಮಿಸಿದ್ದ ಪ್ರವಾಸಿ ಯುವಕ ನೊಬ್ಬ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ಕಕ್ಕಬೆಯಲ್ಲಿ ಸಂಭವಿಸಿದೆ.

Advertisement

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಹರಿಯಾಣದ ಜತಿನ್‌ ಕುಮಾರ್‌ (23) ಮೃತಪಟ್ಟ ಯುವಕ.

ಬೆಂಗಳೂರಿನಲ್ಲಿ ಉದ್ಯೋಗಿಗಳಾಗಿರುವ ಮೂವರು ಯುವಕರು ಮತ್ತು ಮೂವರು ಯುವತಿಯರ ಸಹಿತ ಒಟ್ಟು 6 ಮಂದಿ ಚಾರಣಿಗರ ತಂಡ ಬೆಟ್ಟವನ್ನು ಏರಲು ಕಕ್ಕಬ್ಬೆಗೆ ಆಗಮಿಸಿತ್ತು. ಶಿಖರದ ತುದಿ ತಲುಪುತ್ತಿದ್ದಂತೆ ಉಸಿರಾಟದ ಸಮಸ್ಯೆಯಿಂದಾಗಿ ಜತಿನ್‌ ಕುಸಿದು ಬಿದ್ದರು. ತಂಡದಲ್ಲಿದ್ದ ವೈದ್ಯರೊಬ್ಬರು ತತ್‌ಕ್ಷಣ ಪ್ರಥಮ ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳದೆ ಸಾವನಪ್ಪಿದರು.

ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶಿಖರದ ತುದಿಯಿಂದ ನಾಪೋಕ್ಲು ಪೊಲೀಸ್‌ ಠಾಣಾಧಿಕಾರಿ ಮಂಜುನಾಥ್‌, ಸಿಬಂದಿ, ಗ್ರಾ.ಪಂ. ಸದಸ್ಯ ಕುಡಿಯರ ಭರತ್‌, ಉಪ ವಲಯ ಅರಣ್ಯ ಅಧಿಕಾರಿ ಎಂ.ಬಿ. ಸುರೇಶ್‌, ಗಸ್ತು ಅರಣ್ಯ ಪಾಲಕ ಸೋಮಣ್ಣ ಗೌಡ ಕಠಿನ ದಾರಿಯಲ್ಲಿ ಮೃತದೇಹವನ್ನು ಹೊತ್ತು ಕೆಳಕ್ಕೆ ತಂದರು. ದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next