Advertisement

Madikeri ಮಳೆಯಿಂದ ಉದುರುತ್ತಿರುವ ಕಾಫಿಕಾಯಿ: ಬೆಳೆಗಾರ ಕಂಗಾಲು

12:01 AM Jul 25, 2024 | Team Udayavani |

ಮಡಿಕೇರಿ: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ಆರ್ಥಿಕ ಬೆನ್ನೆಲುಬಾಗಿರುವ ಕಾಫಿ ಫ‌ಸಲಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಜಿಲ್ಲೆಯ ವಿವಿಧೆಡೆ ಹಲವು ತೋಟಗಳಲ್ಲಿ ಅತಿಯಾದ ಮಳೆೆಯಿಂದ ಉಂಟಾಗಿರುವ ಶೀತದ ವಾತಾವರಣದಿಂದ ಕಾಫಿ ಕಾಯಿಗಳು ಕೊಳೆತು ಉದುರಲಾರಂಭಿಸಿವೆ.

Advertisement

ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ಸರಾಸರಿ 68 ಇಂಚು ಮಳೆ ದಾಖಲಾಗಿದ್ದು, ಮಡಿಕೇರಿ ತಾಲೂಕಿನಲ್ಲಿ ದಾಖಲೆಯ 95 ಇಂಚು ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 74 ಇಂಚು, ವಿರಾಜಪೇಟೆ ತಾಲೂಕಿನಲ್ಲಿ 64, ಪೊನ್ನಂಪೇಟೆ 64 ಇಂಚು, ಕುಶಾಲನಗರ ತಾಲೂಕಿನಲ್ಲಿ 42 ಇಂಚಿನಷ್ಟು ಮಳೆ ದಾಖಲಾಗಿದೆ.

ಅಂಕಿಅಂಶಗಳ ಆಧಾರದಲ್ಲಿ ಮಡಿಕೇರಿ ತಾಲ್ಲೂಕಿನಲ್ಲಿ ಅತೀ ಹೆಚ್ಚಿನ ಮಳೆೆಯಾಗಿದ್ದರೆ ಸಂಪಾಜೆ ಹೋಬಳಿ, ಭಾಗಮಂಡಲ, ನಾಪೋಕ್ಲು, ಶಾಂತಳ್ಳಿ, ಹುದಿಕೇರಿ, ದಕ್ಷಿಣ ಕೊಡಗಿನ ಬಹುತೇಕ ಗ್ರಾಮಗಳು ಮತ್ತು ಸೋಮವಾರಪೇಟೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮಳೆಯಾಗಿದೆ.

ಕಾಫಿ ಕಾಯಿ ಕಟ್ಟಿ ಬೆಳೆೆಯುವ ಅತ್ಯಂತ ಸೂಕ್ಷ್ಮವಾದ ಈ ಅವಧಿಯಲ್ಲಿ ಕಾಫಿ ಕಾಯಿಗಳ ಇಡೀ ಗೊಂಚಲು ಕೊಳೆ ರೋಗಕ್ಕೆ ಸಿಲುಕಲಾರಂಭಿಸಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಸೋಮವಾರಪೇಟೆ: ಮಳೆಯಿಂದ ಹಾನಿ
ಸೋಮವಾರಪೇಟೆ: ತಾಲೂಕಿನಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಮರ ಬಿದ್ದು ಹಾನಿ ಸಂಭವಿಸಿದೆ.

Advertisement

ಕಾರೇಕೊಪ್ಪ ಗ್ರಾಮದ ಬಳಿಯಲ್ಲಿ ರಾಜ್ಯ ಹೆದ್ದಾರಿಗೆ ಬೆಳಗ್ಗೆ ಅಡ್ಡಲಾಗಿ ಮರಬಿದ್ದು ಸಂಚಾರ ವ್ಯತ್ಯಯವಾಗಿತ್ತು. ಆಗ್ನಿಶಾಮಕದಳ ಸಿಬಂದಿಗಳು ಮರವನ್ನು ತೆರವುಗೊಳಿಸಿದರು.

ಶಿರಂಗಳ್ಳಿ ಗ್ರಾಮದಲ್ಲಿ ವಿದ್ಯುತ್‌ ತಂತಿಯ ಮೇಲೆ ಮರಬಿದ್ದು ವಿದ್ಯುತ್‌ ಸಂಪರ್ಕ ಕಡಿತವಾಗಿದೆ. ನೇರುಗಳಲೆ ಗ್ರಾಮದ ವೃದ್ದ ದಂಪತಿ ಗೌರಿ ಮತ್ತು ಪುಟ್ಟ ಅವರ ಮನೆಯ ಗೋಡೆ ಕುಸಿದು ಬಿದ್ದಿದೆ. ಶನಿವಾರಸಂತೆ ಪಶುಆಸ್ಪತ್ರೆ ಮೇಲೆ ಮರಬಿದ್ದು ಹಾನಿಯಾಗಿದೆ. ಬಿದರೂರು ಗ್ರಾಮದ ನೀತುಚಂದ್ರ ಅವರ ಮನೆ ಮೇಲೆ ಮರಬಿದ್ದು ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next