ಮಡಿಕೇರಿ: ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂ ಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿ ಗಳು ಉತ್ತಮ ಪ್ರಜೆಗಳಾಗಿ ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದು ಜಿಲ್ಲಾ ಪೋಲಿಸ್ ವರಿಷ್ಠಧಿಕಾರಿ ಡಾ.ಸುಮನ್ ಪೆಣ್ಣೇಕರ್ ಹೇಳಿದರು. ಅವರು ನೆಹರೂ ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮೂರು ತಾಲ್ಲೂಕು ಯುವ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನ ಆವರಣದಲ್ಲಿ ಯುವ ಸಪ್ತಾಹದ ಅಂಗವಾಗಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವೇಕಾನಂದರು ಭಾರತ ದೇಶ ಕಂಡ ಅದ್ಭುತ ವ್ಯಕ್ತಿಯಾಗಿದ್ದು, ಅವರು ನೀಡಿರುವ ಸಂದೇಶಗಳು ಇಂದಿಗೂ ಯುವ ಜನರನ್ನು ಪ್ರೇರೆಪಿಸುತ್ತಿದೆ. ವಿದ್ಯಾರ್ಥಿಗಳು ವಿವೇಕಾನಂದರ ತತ್ವ ಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಆದರ್ಶ ವ್ಯಕ್ತಿಗಳಾಗಿ ಅಭ್ಯುದಯವನ್ನು ಸಾಧಿಸಬೇಕೆಂದರು.
ಪ್ರಸ್ತುತ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ವಿಷಾದಿಸಿದ ಎಸ್‌ಪಿ ಸುಮನ್, ವಿದ್ಯಾರ್ಥಿಗಳು ಮೊಬೈಲ್, ಟಿವಿ, ಗೇಮ್ಸ್‌ಗಳಲ್ಲಿ ಕಾಲಹರಣ ಮಾಡುವುದನ್ನು ಬಿಟ್ಟು ಪೋಷಕರೊಂದಿಗೆ ಬೆರೆತು ಬಂಧುಬಳಗ, ಸ್ನೇಹಿತರು, ಕ್ರೀಡೆ ಹಾಗೂ ಓದಿನ ಕಡೆ ಹೆಚ್ಚು ಗಮನ ಹರಿಸುವ ಮೂಲಕ ಶಿಸ್ತಿನ ಜೀವನ ನಡೆಸಬೇಕೆಂದರು. ಧನಂಜಯ ಅಗೋಳಿಕಜೆ ಅವರು ‘ವಿವೇಕಾನಂದರ ಆದರ್ಶ ತತ್ವಗಳು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಸ್ವಾಮೀ ವಿವೇಕಾನಂದರು ತಮ್ಮ ಜ್ಞಾನದಿಂದ ಜಗತ್ತನ್ನು ಗೆದ್ದು ಬಂದವರು. ಒಳ್ಳೆಯ ಉದ್ದೇಶ ಹಾಗೂ ಸತ್ಯತೆಯಿಂದ ಅವರು ದೇಶವನ್ನು ಗೆದ್ದಿದ್ದಾರೆ ಎಂದರು.
ಸ್ಪರ್ಧಾ ವಿಜೇತರು
ಸಮಾರಂಭದ ಪ್ರಯುಕ್ತ ನಡೆದ ಚಿತ್ರಕಲೆ ಸ್ಪರ್ಧೆಯಲ್ಲಿ ಆರ್.ವಿ. ಮದನ್ ಪ್ರಥಮ (ವಾಣಿಜ್ಯ ವಿಭಾಗ), ದ್ವಿತೀಯ ಪ್ರಿಯಧನ್ಯ, ತೃತೀಯ ಆರ್. ಶರತ್ ಪಡೆದು ಕೊಂಡರೆ, ಪ್ರಬಂಧ ಸ್ಪರ್ಧೆಯಲ್ಲಿ ಟಿ.ಪಿ. ಜಶ್ಮಿತ ಪ್ರಥಮ (ವಾಣಿಜ್ಯ ವಿಭಾಗ), ದ್ವೀತಿಯ ಜಿ. ಸಂಗೀತ, ತೃತೀಯ ಬಹುಮಾನ ಬಿ.ಎಸ್.ಅನುಷಾ ಪಡೆದುಕೊಂಡಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ, ಮಡಿಕೇರಿ ಸ. ಪ ಪೂ.ಕಾಲೇಜಿನ ಪ್ರಾಚಾರ್ಯ ವಿಜಯ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಸುಕು ಮಾರ್, ತಾಲೂಕು ಅಧ್ಯಕ್ಷ ನವೀನ್ ದೇರಳ ಮೊದಲಾದವರು ಉಪಸ್ಥಿತರಿದ್ದರು.