Advertisement

ಮಡಿಕೇರಿ ನಗರಸಭೆ ಚುಕ್ಕಾಣಿ ನಮ್ಮದೆ: ಜಿಲ್ಲಾ ಕಾಂಗ್ರೆಸ್‌ ವಿಶ್ವಾಸ

10:51 PM Feb 16, 2020 | Sriram |

ಮಡಿಕೇರಿ: ಜನಸಾಮಾನ್ಯರ ಮತ್ತು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಕಾಂಗ್ರೆಸ್‌ ಪಕ್ಷದ ಬಲವರ್ಧನೆಯಾಗಬೇಕಾಗಿದ್ದು, ಮುಂಬರುವ ಮಡಿಕೇರಿ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್‌ ಸದಸ್ಯೆ‌ ಶಾಂತೆಯಂಡ ವೀಣಾಅಚ್ಚಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಮಡಿಕೇರಿ ಬ್ಲಾಕ್‌ ಕಾಂಗ್ರೆಸ್‌ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

‌ಪ್ರಮುಖರಾದ ಪುಲಿಯಂಡ ಜಗದೀಶ್‌, ಪ್ರಕಾಶ್‌ ಆಚಾರ್ಯ, ಪ್ರಭು ರೈ, ಟಿ.ಪಿ.ನಾಣಯ್ಯ, ಸುನೀಲ್‌ ನಂಜಪ್ಪ, ಎಂ.ಇ.ಹನೀಫ್, ಜಗದೀಶ್‌, ಉದಯ ಕುಮಾರ್‌, ಕೆ.ಎಂ.ವೆಂಕಟೇಶ್‌, ಮೋಹನ್‌ದಾಸ್‌ ಹಾಜರಿದ್ದು ನಗರಸಭಾ ಚುನಾವಣೆಯನ್ನು ಗೆಲ್ಲುವ ಕುರಿತು ಸಲಹೆಗಳನ್ನು ನೀಡಿದರು. ಕೆಪಿಸಿಸಿ ಸದಸ್ಯ ಟಿ.ಪಿ.ರಮೇಶ್‌, ಜಿಲ್ಲಾ ಕಾಂಗ್ರೆಸ್‌ ಖಜಾಂಚಿ ಹೆಚ್‌.ಎಂ.ನಂದಕುಮಾರ್‌ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಎಸ್‌.ಸಿ., ಎಸ್‌.ಟಿ ಮತ್ತು ಓಬಿಸಿ ವರ್ಗಗಳ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ತೀರ್ಪಿಗೆ ಕೇಂದ್ರ ಸರ್ಕಾರ ಕಾರಣವಾಗಿದೆ ಎಂದು ಆರೋಪಿಸಿದ ಸಭೆ ಖಂಡನಾ ನಿರ್ಣಯ ಕೈಗೊಂಡಿತು.

ಜಿಲ್ಲಾ ಕಾಂಗ್ರೆಸ್‌ ವಕ್ತಾರ ಟಾಟು ಮೊಣ್ಣಪ್ಪ, ಅಲ್ಪಸಂಖ್ಯಾಕ‌ರ ಘಟಕದ ಅಧ್ಯಕ್ಷ ಎಂ.ಎ.ಉಸ್ಮಾನ್‌, ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆಯ ಅಧ್ಯಕ್ಷ ತೆನ್ನಿರ ಮೈನಾ, ಡಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್‌, ಸೋನಿಯ ಬ್ರಿಗೇಡ್‌ನ‌ ಜಿಲ್ಲಾಧ್ಯಕ್ಷ ಜಾನ್ಸನ್‌, ವೃತ್ತಿಪರ ಘಟಕದ ಅಧ್ಯಕ್ಷ ಅಂಬೆಕಲ್‌ ನವೀನ್‌ ಕುಶಾಲಪ್ಪ, ಡಿಸಿಸಿ ಪ್ರಮುಖರಾದಾಜೇಂದ್ರ, ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮಿನಾಜ್‌ ಪ್ರವೀಣ್‌, ನಗರ ಯುವ ಕಾಂಗ್ರೆಸ್‌ ಅಧ್ಯಕ್ಷ ಸದಾಮುದ್ದಪ್ಪ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಾಹುಲ್‌ ಮಾರ್ಷಲ್‌, ಎಸ್‌ಸಿ ಘಟಕದ ಅಧ್ಯಕ್ಷ ಮುದ್ದುರಾಜ್‌, ಹಿಂದುಳಿದ ವರ್ಗದ ಅಧ್ಯಕ್ಷಜಗದೀಶ್‌, ರಾಹುಲ್‌ ಬ್ರಿಗೇಡ್‌ನ‌ ಅಧ್ಯಕ್ಷ ಯತೀಶ್‌ ಕುಮಾರ್‌, ಪ್ರಮುಖರಾದ ಕಾನೆಹಿತ್ಲು ಮೊಣ್ಣಪ್ಪ, ಮುನೀರ್‌ ಮಾಚರ್‌, ಕುಶಾಲಪ್ಪ, ಜಯಣ್ಣ,ಸದಾ ಡೆನ್ನಿಸ್‌, ಶೇಖ್‌ ಅಹಮ್ಮದ್‌, ಅಬ್ದುಲ್‌ ಹಮೀದ್‌, ಸ್ವರ್ಣಲತಾ, ಪೂರ್ಣಿಮಾ, ಕುರಿಕಡ ಆನಂದ, ಚಂದ್ರುಉಪಸ್ಥಿತರಿದ್ದರು.

Advertisement

ಅಧಿಕಾರಕ್ಕೇರುವ ಗುರಿ
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಪ್ರು ರವೀಂದ್ರ ಅವರು, ಮುಂಬರುವ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದೇ ಬ್ಲಾಕ್‌ ಕಾಂಗ್ರೆಸ್‌ನ ಗುರಿಯಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್‌ ಕುಮಾರ್‌ ಬೂತ್‌ ಮಟ್ಟದಲ್ಲಿ ಸಭೆ ನಡೆಸುವ ಮೂಲಕ ಪಕ್ಷವನ್ನು ಬಲಗೊಳಿಸುವಂತೆ ಸಲಹೆ ನೀಡಿದರು.ಜಿ.ಪಂ ಸದಸ್ಯೆಕೆ.ಪಿ.ಚಂದ್ರಕಲಾ ಮಾತನಾಡಿ, ಬೂತ್‌ ಮಟ್ಟ ಮತ್ತು ವಲಯ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಮೂಲಕ‌ ಮುಂದಿನ ಗ್ರಾ.ಪಂ ಚುನಾವಣೆಗೆ ಸಜ್ಜಾಗುವಂತೆ ತಿಳಿಸಿದರು. ಪಕ್ಷ¨.ಚಂದ್ರಮೌಳಿ. ಪಕ್ಷದ ಬಲವರ್ಧನೆಗೆ ಸಹಕಾರ ನೀಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next