Advertisement

ಮಡಿಕೇರಿ: ಪಥಸಂಚಲನದ ಮೂಲಕ ಮತದಾನದ ಅರಿವು

02:10 AM Apr 18, 2019 | sudhir |

ಮಡಿಕೇರಿ: ಲೋಕಸಭಾ ಚುನಾವಣೆಗೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದ್ದು ಮತದಾರರು ಮುಕ್ತ ಮತ್ತು ನಿರ್ಭೀತವಾಗಿ ಮತ ಚಲಾಯಿಸುವಂತೆ ಕೊಡಗು ಜಿಲ್ಲಾ ಪೊಲೀಸ್‌ ಇಲಾಖೆ ಪಥ ಸಂಚಲನದ ಮೂಲಕ ಜನರಲ್ಲಿ ಆತ್ಮವಿಶ್ವಾಸ ತುಂಬಿತು.

Advertisement

ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಡಾ.ಸುಮನ್‌ ಪಣ್ಣೇಕರ್‌ ಮಾರ್ಗದರ್ಶನದಲ್ಲಿ ಮಡಿಕೇರಿ ಉಪವಲಯ ಅಧೀಕ್ಷಕ ಸುಂದರ್‌ ರಾಜ್‌ ನೇತೃತ್ವದಲ್ಲಿ ನೂರಾರು ಪೊಲೀಸ್‌ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ನಗರದ ಮುಖ್ಯ ಬೀದಿಗಳಲ್ಲಿ ಶಸ್ತ್ರಸಜ್ಜಿತರಾಗಿ ಪಥ ಸಂಚಲನ ನಡೆಸಿ, ಪ್ರತಿಯೊಬ್ಬರೂ ನಿರ್ಭೀತಿಯಿಂದ ಮತ ಚಲಾಯಿಸುವಂತೆ ಅಭಯ ನೀಡಿದರು. ಮಾತ್ರವಲ್ಲದೇ, ಮತದಾನದ ಸಂದರ್ಭ ಶಾಂತಿ ಸುವ್ಯವಸ್ತೆ ಕಾಪಾಡಲು ಕೂಡ ಪೊಲೀಸ್‌ ಇಲಾಖೆ ಬದ್ದವಾಗಿದ್ದು, ಯಾವುದೇ ಬೆದರಿಕೆ, ಆಸೆ ಆಮಿಷಗಳಿಗೆ ಒಳಗಾಗದೇ ಮತ ಚಲಾಯಿಸುವಂತೆ ಆರಕ್ಷಕರು ಮನವಿ ಮಾಡಿದರು.

ಜಿಲ್ಲಾ ಪೊಲೀಸ್‌ ಕ್ರೀಡಾಂಗಣದಿಂದ ಪ್ರಾರಂಭವಾದ ಪಥ ಸಂಚಲನ ಇಂದಿರಾಗಾಂಧಿ ವೃತ್ತ, ಮಹದೇವಪೇಟೆ, ಬನ್ನಿ ಮಂಟಪ, ಮಾರ್ಕೇಟ್‌, ಗಣಪತಿ ಬೀದಿ, ಹಳೇ ಖಾಸಗಿ ಬಸ್‌ ನಿಲ್ದಾಣ, ತಿಮ್ಮಯ್ಯ ವೃತ್ತ ಸೇರಿದಂತೆ ಮುಖ್ಯ ರಸ್ತೆಗಳಲ್ಲಿ ಸಂಚರಿಸಿತು. ಇದಕ್ಕೂ ಮುನ್ನ ಪೊಲೀಸ್‌ ವರಿಷ್ಟಾಧಿಕಾರಿ ಡಾ.ಸುಮನ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಚುನಾವಣಾ ಸಮಯದಲ್ಲಿ ಹೇಗೆ ಕರ್ತವ್ಯ ನಿರ್ವಹಿಸಬೇಕೆಂದು ನಿರ್ದೇಶನ ನೀಡಿದರು. ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳ ವೃತ್ತ ನಿರೀಕ್ಷಕರು, ಉಪ ನಿರೀಕ್ಷಕರು, ಕೊಡಗು ಕಮಾಂಡೋ, ಜಿಲ್ಲಾ ಸಶಸ್ತ್ರ ಪೊಲೀಸ್‌ ತುಕಡಿ, ಸಂಚಾರಿ ಪೊಲೀಸರು, ಗೃಹ ರಕ್ಷಕ ದಳ, ಮಹಿಳಾ ಪೊಲೀಸ್‌ ಸಿಬ್ಬಂದಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next