ಮಡಿಕೇರಿ: ಹಸುವೊಂದನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದ ಘಟನೆ ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ನಡೆದಿದೆ.
ಮಂಗಳವಾರ (22 ಜೂನ್) ಸಂಜೆ 7 ಗಂಟೆಗೆ ಈ ಪ್ರಕರಣ ನಡೆದಿದ್ದು, ವಿಷಯ ತಿಳಿದು ಸ್ದಳಕ್ಕೆ 50ಕ್ಕೂ ಹೆಚ್ಚು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರ ದೌಡಾಯಿಸಿ ನಾಲ್ಕು ದಿಕ್ಕುಗಳಿಂದ ಸುತ್ತುವರಿದ್ದಾರೆ. ಈ ವೇಳೆ ಮುಂಚೂಣಿ ತಂಡದ ಕಾರ್ಯಕರ್ತನ ಎದೆಗೆ ಕೋವಿಯಿಟ್ಟು ಬೆದರಿಸಿ ದುಷ್ಕರ್ಮಿಗಳು ಕತ್ತಲಲ್ಲಿ ಪರಾರಿಯಾಗಿದ್ದಾರೆ.
ಕಗ್ಗೋಡ್ಲು ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೋಲೀಸರ ಭೇಟಿ ನೀಡಿ ಸ್ಥಳದಲ್ಲಿದ್ಢ ಗೋಮಾಂಸ ಮತ್ತು ಚಾಕು ವಶಪಡಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಈಗ ಡೆಲ್ಟಾ ಪ್ಲಸ್ ಅಬ್ಬರ : ಮಹಾರಾಷ್ಟ್ರ, ಕೇರಳ, ಮ.ಪ್ರದೇಶದಲ್ಲಿ ಹೊಸ ರೂಪಾಂತರಿ ಹಾವಳಿ
ಕೊಡಗಿನಲ್ಲಿ ದಿನನಿತ್ಯವೂ ಗೋಹತ್ಯೆ ನಡೆಯುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಪೋಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಹಿಂದು ಜಾಗರಣ ವೇದಿಕೆ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವಾರವಷ್ಟೆ ಕಗ್ಗೋಡ್ಲುವಿನಲ್ಲಿ ರೈತರ ಗೋವಿಗೆ ಗುಂಡಿಕ್ಕಿದ ದುಷ್ಕರ್ಮಿಗಳು ಮಾಂಸ ಮಾಡಿ ಕೊಂಡೊಯ್ದಿದ್ದರು. ಇದೀಗ ಮತ್ತೊಂದು ಪ್ರಕರಣದ ಹಿನ್ನಲೆಯಲ್ಲಿ ಆಕ್ರೋಶ ಭುಗಿಲೆದೆದ್ದಿದೆ.