Advertisement

Mobile usage: ಅಮ್ಮನ ಆಕ್ಷೇಪದಿಂದ ನೊಂದಿದ್ದ ಮಾನ್ಯಾ

10:23 AM Aug 08, 2023 | Team Udayavani |

ಮಲ್ಪೆ: ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಕಾಲೇಜು ವಿದ್ಯಾರ್ಥಿನಿ ಮಡಿಕೇರಿಯ ಮಾನ್ಯಾ ಅ. 3ರಂದು ತನ್ನ ಆತ್ಮೀಯ ಗೆಳತಿ, ಸಹಪಾಠಿ ಯಶಸ್ವಿನಿ ಜತೆ ಮನೆ ಬಿಟ್ಟು ಬಂದಿದ್ದರು.

Advertisement

ಮಾನ್ಯಾ ಯಾವಾಗಲೂ ಮೊಬೈಲ್‌ ಬಳಸುತ್ತಿರು ವುದನ್ನು ತಾಯಿ ಆಕ್ಷೇಪಿಸುತ್ತಿದ್ದಾರೆನ್ನಲಾಗಿದೆ. ಇದ ರಿಂದಾಗಿಯೂ ಆಕೆ ನೊಂದುಕೊಂಡಿದ್ದರು. ಮನೆ ಬಿಟ್ಟು ಬೇರೆ ಕಡೆ ಉದ್ಯೋಗಕ್ಕೆ ಸೇರಿಕೊಂಡು ಏನಾದರು ಸಾಧನೆ ಮಾಡಬೇಕೆಂದು ಯೋಚಿಸಿದ್ದು, ಈ ಬಗ್ಗೆ ಗೆಳತಿ ಯಶಸ್ವಿನಿಯಲ್ಲಿ ಹೇಳಿಕೊಂಡಿದ್ದರು. ಆಕೆ ಸಹಪಾಠಿಯ ನಿರ್ಧಾರಕ್ಕೆ ಸಾಥ್‌ ನೀಡಿದ್ದರು. ಯಶಸ್ವಿನಿ ತಾನು ಹೊಂದಿಸಿಟ್ಟ 8 ಸಾವಿರ ರೂಪಾಯಿ ಗಳೊಂದಿಗೆ ಸ್ನೇಹಿತೆ ಯಶಸ್ವಿನಿಯ ಜತೆಗೂಡಿ ಮನೆ ಬಿಟ್ಟು ಬಂದಿದ್ದರು.

ಮಡಿಕೇರಿಯಿಂದ ಮೈಸೂರಿಗೆ, ಅಲ್ಲಿಂದ ಬೆಂಗಳೂರು, ಪುಣೆ, ಮಂಗಳೂರಲ್ಲಿ ಸುತ್ತಾಡಿ ಶನಿವಾರ ಸಂಜೆ ಮಲ್ಪೆ ಬೀಚ್‌ಗೆ ತಲುಪಿದ್ದರು. ಬೀಚ್‌ನ ಮುಖ್ಯ ಭಾಗದಿಂದ 500 ಮೀ. ದೂರ ಉತ್ತರ ಭಾಗದಲ್ಲಿ ತಡೆಗೋಡೆಗೆ ಹಾಕಲಾದ ಕಲ್ಲಿನ ಮೂಲಕ ನೀರಿಗೆ ಇಳಿದಿದ್ದರು.

ಮನೆಯಿಂದ ಮಲ್ಪೆ ಬೀಚ್‌ಗೆ ಬರುವ ವರೆಗೆ ಇವರಿಬ್ಬರು ಮಾತ್ರವೇ ಇದ್ದರು ಎಂಬುದು ಸಿಸಿ ಕೆಮರಾ ಪರಿಶೀಲನೆಯಿಂದ ದೃಢಪಟ್ಟಿದೆ ಎಂದು ಮಲ್ಪೆ ಠಾಣಾಧಿಕಾರಿ ಗುರುನಾಥ್‌ ಹಾದಿಮನೆ ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಆತ್ಮಹತ್ಯೆಗೆ ಪ್ರಯತ್ನಿಸಿರುವಂತೆ ಕಂಡುಬರುತ್ತದೆ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.

Advertisement

ಆ. 3ರಂದು ಬೆಳಗ್ಗೆ ಕಾಲೇಜಿಗೆ ತೆರಳಿದ್ದ ಈ ಬಾಲಕಿಯರು ಸಂಜೆ ಮನೆಗೆ ಮರಳಿರಲಿಲ್ಲ. ದಿನನಿತ್ಯ ಬರುವ ಬಸ್ಸಿನಲ್ಲಿ ಬಾರದಿ ದ್ದಾಗ ಪೋಷಕರು ಕೊಡಗು ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next