Advertisement

ವೈಭವದ ಮಡಿಕೇರಿ ದಸರಾ ಆಚರಣೆಗೆ ನಿರ್ಧಾರ : 1 ಕೋ.ರೂ. ಅನುದಾನ; 18 ಲಕ್ಷ ರೂ. ಜಿಎಸ್‌ಟಿ!

09:37 AM Sep 06, 2022 | Team Udayavani |

ಮಡಿಕೇರಿ : ಮಡಿಕೇರಿ ದಸರಾ ಜನೋತ್ಸವವನ್ನು ಸೆ. 26ರಿಂದ ವಿಜೃಂಭಣೆಯಿಂದ ಆಚರಿಸಲು ದಸರಾ ಸಮಿತಿ ನಿರ್ಧರಿಸಿದೆ. ದಶಮಂಟಪಗಳಿಗೆ ತಲಾ 3.30 ಲಕ್ಷ ರೂ. ಮತ್ತು ಕರಗಗಳಿಗೆ ತಲಾ 2 ಲಕ್ಷ ರೂ. ಅನುದಾನ ನೀಡಲು ನಿರ್ಣಯ ಕೈಗೊಳ್ಳಲಾಗಿದೆ.

Advertisement

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಗರ ದಸರಾ ಸಮಿತಿ ಅಧ್ಯಕ್ಷೆಯೂ ಆಗಿರುವ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್‌. ರಮೇಶ್‌ ಅನುದಾನ ಹಂಚಿಕೆಯ ವಿವರ ಪ್ರಕಟಿಸಿದರು.

ಮಡಿಕೇರಿ ದಸರಾಕ್ಕೆ ಶಾಸಕರ ಪ್ರಯತ್ನದಿಂದ ಈ ಬಾರಿ ಸರಕಾರದಿಂದ 1 ಕೋಟಿ ರೂ. ಅನುದಾನ ಮಂಜೂರಾಗಿದೆ. ಈ ಪೈಕಿ 18 ಲಕ್ಷ ರೂ. ಜಿಎಸ್‌ಟಿಗೆ ಸಂದಾಯವಾಗಲಿದೆ. ಉಳಿದಂತೆ ದಶಮಂಟಪಗಳಿಗೆ ತಲಾ 3.30 ಲಕ್ಷ ರೂ. ಹಾಗೂ ನಾಲ್ಕು ಕರಗಗಳಿಗೆ ತಲಾ 2 ಲಕ್ಷ ರೂ. ನೀಡಲಾಗುತ್ತದೆ ಎಂದು ಕೆ.ಎಸ್‌. ರಮೇಶ್‌ ಮಾಹಿತಿ ನೀಡಿದರು.

ಇದನ್ನೂ ಓದಿ : ಮೂಲಸೌಕರ್ಯಕ್ಕೆ 3 ವರ್ಷದಲ್ಲಿ 3 ಲಕ್ಷ ಕೋಟಿ ರೂ. ಸಾಲ ಗುರಿ : ರಾಜ್‌ಕಿರಣ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next