Advertisement

ಮಡಿಕೇರಿ: ಪೆಟ್ರೋಲ್‌ ಬಾಂಬ್‌ ಸ್ಫೋಟಿಸುವ ಪ್ರಸ್ತಾವದ ಆಡಿಯೋ ವೈರಲ್‌, ಇಬ್ಬರು ವಶಕ್ಕೆ

08:57 AM Oct 16, 2022 | Team Udayavani |

ಮಡಿಕೇರಿ : ವಿವಿಧೆಡೆ ಪೆಟ್ರೋಲ್‌ ಬಾಂಬ್‌ ಸ್ಫೋಟಿಸುವ ಮೂಲಕ ಸಮಾಜದಲ್ಲಿ ಭಯ ಹುಟ್ಟಿಸುವ ಕುರಿತು ಮೊಬೈಲ್‌ ಫೋನ್‌ನಲ್ಲಿ ವಿಷಯ ಪ್ರಸ್ತಾವಿಸಿರುವ ಆಡಿಯೋ ವೈರಲ್‌ ಆದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಡಿಕೇರಿ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ.

Advertisement

ನಗರದ ಓರ್ವ ಚುನಾಯಿತ ಜನಪ್ರತಿನಿಧಿ ಹಾಗೂ ಬೆಟ್ಟಗೇರಿಯ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಕೆಲವು ದಿನಗಳ ಹಿಂದೆ ಇವರಿಬ್ಬರು ನಡೆಸಿದ ಮೊಬೈಲ್‌ ಸಂಭಾಷಣೆ ಇದೀಗ ವೈರಲ್‌ ಆಗಿದ್ದು, ನಗರದ ಜನಪ್ರತಿನಿಧಿ ಪೆಟ್ರೋಲ್‌ ಬಾಂಬ್‌ ಹಾಕಿ ಆತಂಕ ಮೂಡಿಸುವ ವಿಷಯ ಪ್ರಸ್ತಾವಿಸಿದ್ದಾನೆ. ಈ ಕುರಿತು ಶೇಷಪ್ಪ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಶನಿವಾರ ಇಬ್ಬರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ನಗರ ಠಾಣೆಯ ಎದುರು ಜಮಾಯಿಸಿ ಆರೋಪಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ : ರಷ್ಯಾ ಸೇನಾ ತರಬೇತಿ ಕೇಂದ್ರದಲ್ಲಿ ಗುಂಡಿನ ದಾಳಿ 11 ಮಂದಿ ಸಾವು, ಹಲವರಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next