Advertisement
ಕಳೆದ ಸಾಲಿನ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆಗೂ ಅಪಾರ ನಷ್ಟವಾಗಿದ್ದು, ಹಾನಿಯ ಕುರಿತಂತೆ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ರಾಜ್ಯ ಪೊಲೀಸ್ ಹೌಸಿಂಗ್ ಕಾರ್ಪೊàರೇಷನ್‌ಗೆ ವಿಸ್ತತ ವರದಿ ಸಲ್ಲಿಸಿತ್ತು. ಈ ಹಿನ್ನಲೆಯಲ್ಲಿ ವಿಶೇಷ ತಂತ್ರಜ್ಞರ ತಂಡ ಈ ಹಿಂದೆ ಜಿಲ್ಲೆಗೆ ಆಗಮಿಸಿ ಮಡಿಕೇರಿ, ಸೋಮವಾರಪೇಟೆ, ಶನಿವಾರಸಂತೆ ಮತ್ತು ಕುಟ್ಟ ಪೊಲೀಸ್ ಠಾಣೆಗಳಿಗೆ ತೆರಳಿ ಪರಿಶೀಲನೆ ನಡೆಸಿತ್ತು. ಅತಿಯಾದ ಮಳೆಯಿಂದ ಪೊಲೀಸ್ ವಸತಿ ಗೃಹ, ಠಾಣೆಗಳು ಮತ್ತು ಕಚೇರಿಗಳಿಗಾದ ಹಾನಿ, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಂತ್ರಜ್ಞರು ಇಲಾಖೆ ಮೂಲಕ ಸರಕಾರಕ್ಕೆ ವರದಿ ಸಲ್ಲಿಸಿದ್ದರು.
Related Articles
ಪೊಲೀಸ್ ಹೌಸಿಂಗ್ ಕಾರ್ಪೊàರೇಶನ್‌ನ ಪ್ರಧಾನ ಅಭಿಯಂತರ ಏಝಾಜ್ ಹುಸೇನ್ ಮಾತನಾಡಿ, ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ, ಶನಿವಾರಸಂತೆ ಮತ್ತು ಕುಟ್ಟು ಪೊಲೀಸ್ ಠಾಣೆ, ವಸತಿ ಗೃಹ, ಕಚೇರಿಗಳ ದುರಸ್ತಿ ಮತ್ತು ಕೆಲವು ಆಧುನೀಕರಣ ಕಾಮಗಾರಿಗಳೊಂದಿಗೆ ರಸ್ತೆ, ಒಳಚರಂಡಿ, ತಡೆಗೋಡೆ ಕಾಮಗಾರಿಗಳನ್ನು ಮಾಡಲಾಗುತ್ತದೆ. ಈ ಕಾಮಗಾರಿಗಳನ್ನು ಪೂರೈಸಲು 3 ತಿಂಗಳ ಗಡುವು ನೀಡಲಾಗಿದ್ದು, ಕಾಮಗಾರಿ ಆರಂಭಿಸಲಾಗುತ್ತದೆ ಎಂದು ತಿಳಿಸಿದರು. ರಸ್ತೆಗಳಲ್ಲಿ ನಡೆದಾಡುವುದೇ ದುಸ್ತರವಾಗಿ ಪರಿಣಮಿಸಿದೆ. ಸಂಚಾರ ನಿಯಂತ್ರಿಸುವುದೇ ಸವಾಲಾಗಿದೆ.
Advertisement