Advertisement
ವಿರಾಜಪೇಟೆಯ ವಡ್ಡರಮಾಡು ಗ್ರಾಮದ 40 ವರ್ಷದ ಪುರುಷ, ಬೆಕ್ಕೆ ಸೊಡೂರುವಿನ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕದ 44 ವರ್ಷದ ಮಹಿಳೆಗೂ ಸಹ ಸೋಂಕು ದೃಢಪಟ್ಟಿದೆ. ಮಡಿಕೇರಿಯ ದಾಸವಾಳ ರಸ್ತೆಯ 37 ವರ್ಷದ ಪುರುಷನಿಗೆ ಹಾಗೂ ಈ ಹಿಂದೆ ಸೋಂಕು ದೃಢಪಟ್ಟಿದ್ದ ಸೋಮವಾರಪೇಟೆ ತಾಲೂಕಿನ ತಾಳತ್ತರ ಶೆಟ್ಟಳ್ಳಿ ಗ್ರಾಮದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 47 ವರ್ಷದ ಪುರುಷ, 46 ವರ್ಷದ ಮಹಿಳೆ, 24 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 298 ಪ್ರಕರಣಗಳು ಪತ್ತೆಯಾಗಿದ್ದು, 210 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಸರಕಾರದ ಹೊಸ ಆದೇಶದಂತೆ ಜಿಲ್ಲೆಯಲ್ಲಿ ಜುಲೈ 15ರಿಂದ 31ರ ವರೆಗೆ ಜಾರಿಯಲ್ಲಿರುವಂತೆ ಹೊರಡಿಸಲಾಗಿದ್ದ ನಿರ್ಬಂಧಕಾಜ್ಞೆಯನ್ನು ಮಾರ್ಪಡಿಸಲಾಗಿದೆ. ಹೀಗಾಗಿ ಜು. 25ರ ಶನಿವಾರ ಲಾಕ್‌ಡೌನ್ ಇರುವುದಿಲ್ಲ. ಜುಲೈ 26ರ ರವಿವಾರ ಲಾಕ್ ಡೌನ್ ಇರುತ್ತದೆ. ವಾರದ ಎಲ್ಲ ದಿನಗಳಲ್ಲಿ ರಾತ್ರಿ 9ರಿಂದ ಬೆಳಗ್ಗೆ 5 ಗಂಟೆಯ ವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.