Advertisement

ಮಾದಿಗ ಸಮುದಾಯ ಡಾ.ಜಿ.ಪರಮೇಶ್ವರ್‌ ಜತೆಗಿದೆ:ಕಾಂಗ್ರೆಸ್ ಮುಖಂಡ ವಾಲೇಚಂದ್ರಯ್ಯ

07:36 PM Mar 18, 2023 | Team Udayavani |

ಕೊರಟಗೆರೆ: ಮಾದಿಗ ಸಮುದಾಯದ ಗಂಗಮಾಳಮ್ಮನವರ ಎದೆಹಾಲು ಕುಡಿದು ಬೆಳೆದ ಡಾ.ಜಿ.ಪರಮೇಶ್ವರ ರವರ ತಾತರಿಂದ ಹಿಡಿದು ಅವರ ಕುಟುಂಬವು ಸದಾ ಮಾದಿಗ ಸಮುದಾಯದೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದು ಕಳೆದ ಸಮಾರಂಭವೊಂದರಲ್ಲಿ ಜನಸಾಮಾನ್ಯರ ಆಡು ಭಾಷೆಯನ್ನು ಪರಮೇಶ್ವರರವರು ಆಡಿರುವುದನ್ನು ವಿರೋಧಿಗಳು ಉದ್ದೇಶ ಪೂರ್ವಕವಾಗಿ ತಪ್ಪು ಅರ್ಥ ಬರುವಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ನಗರ ಪಾಲಿಕೆ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ವಾಲೇಚಂದ್ರಯ್ಯ ತಿಳಿಸಿದರು.

Advertisement

ಅವರು ಕೊರಟಗೆರೆ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ರಾಜೀವ್ ಭವನದಲ್ಲಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಾದಿಗ ಸಮುದಾಯದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಕಳೆದ ೧೫ ವರ್ಷಗಳಿಂದ ಕ್ಷೇತ್ರದಲ್ಲಿ ಮಾದಿಗ ಸಮುದಾಯವನ್ನು ಸಮಾನ ರೀತಿಯಲ್ಲಿ ಕಾಣುತ್ತಿದ್ದು ಎಂದೂ ತಾತ್ಸಾರ ಮನೋಭಾವದಿಂದ ನೋಡಿಲ್ಲ ಕಾಲೋನಿಗಳಲ್ಲಿ ಅನೇಕ ಅಭಿವೃದ್ದಿ ಕಾರ್ಯಕ್ರಮಗಳು ಮಾಡಿದ್ದಾರೆ ಎಂದರು.

ಕಳೆದ ೨೦೦೮ ರ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ನಾನು ಅಭ್ಯರ್ಥಿಯಾಗಿ ಸ್ಪರ್ದಿಸಿದ್ದರೂ ಈ ಕ್ಷೇತ್ರದ ಮಾದಿಗ ಸಮುದಾಯ ನನಗೆ ಮತ ನಿಡದೆ ಉತ್ತಮ ವ್ಯಕ್ತಿ ಅಭಿವೃದ್ದಿಯ ಹರಿಕಾರ ಎಂಬ ದೃಷ್ಠಿಯಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿದ್ದ ಡಾ.ಜಿ.ಪರಮೇಶ್ವರ ರವರಿಗೆ ಮತ ನೀಡಿ ಗೆಲ್ಲಿಸಿದ್ದರು ಅದರಂತೆ ಮತ್ತೆ ೨೦೧೮ ರಲ್ಲೂ ಮತ ನೀಡಿ ವಿಜೇತರನ್ನಾಗಿ ಮಾಡಿದ್ದಾರೆ ಅಂತ ಮಾದಿಗ ಸಮುದಾಯವನ್ನು ಎಂದು ಕಡೆಗಣಿಸಿಲ್ಲ ಕಳೆದ ಸಮಾರಂಭದಲ್ಲಿ ಚುನಾವಣೆಗೆ ಮೀಸೆನಾರೂ ಬರಲಿ ಯಾರೇ ಬರಲಿ ಎಂದು ಸರ್ವೇ ಸಾಮಾನ್ಯವಾಗಿ ಮಾತನಾಡಿದರೆ ವಿನಾಃ ಮತ್ತೇ ಯಾವ ದುರುದ್ದೇಶ ಇಲ್ಲ ಎಂದು ತಿಳಿಸಿದ ಅವರು ಮುಂದಿನ ದಿನಗಳಲ್ಲಿ ಅವರ ಉನ್ನತ ಸ್ಥಾನ ಪಡೆಯುವ ದೃಷ್ಠಿಯಿಂದ ಸಮಾಜದ ಎಲ್ಲಾ ವ್ಯಕ್ತಿಗಳ ಮತ್ತೆ ಡಾ.ಜಿ.ಪರಮೇಶ್ವರ್ ರವರನ್ನು ಆಯ್ಕೆ ಮಾಡಲು ಮುಂದೆ ಬಂದಿದ್ದು ಕೆಲ ವಿರೋಧಿ ವ್ಯಕ್ತಿಗಳ ಮಾತಿಗೆ ಕಿವಿ ಕೊಡದೆ ಡಾ.ಜಿ.ಪರಮೇಶ್ವರ್ ರವರನ್ನು ಬೆಂಬಲಿಸುತ್ತಿರುವುದಾಗಿ ತಿಳಿಸಿದರು.

ಮುಖಂಡ ಚಿಕ್ಕರಂಗಯ್ಯ ಮಾತನಾಡಿ ಡಾ.ಜಿ.ಪರಮೇಶ್ವರ ರವರ ಕಳೆದ ೩೫ ವರ್ಷಗಳಿಂದ ಮಧುಗಿರಿ, ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರಾಗಿನಿಂದಲೂ ಮಾದಿಗ ಸಮುದಾಯವನ್ನು ಉತ್ತಮ ಬಾಂದವ್ಯದೊಂದಿಗೆ ಅಣ್ಣ ತಮ್ಮಂದಿರಂತೆ ಕಾಣುತ್ತಾ ಬಂದಿದ್ದು ಎಂದೂ ಕೀಳಾಗಿ ಕಾಣುವುದು ಅಥವಾ ಮಾತನಾಡುವುದು ಮಾಡಿಲ್ಲ ಕೇವಲ ರಾಜಕೀಯ ಲಾಭ ಪಡೆಯಲು ಹಾಗೂ ಸಮುದಾಯವನ್ನು ಒಡೆಯುವ ದೃಷ್ಟಿಯಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ ಈ ಸುಳ್ಳು ಆರೋಪಕ್ಕೆ ಮಾನ್ಯತೆ ನೀಡದೆ ಹಿಂದಿನಂತೆ ಡಾ.ಜಿ.ಪರಮೇಶ್ವರ ರವರನ್ನೇ ಬೆಂಬಲಿಸಿ ಈ ಬಾರಿ ಚುನಾವಣೆಯಲ್ಲಿ ಆಯ್ಕೆ ಮಾಡಿ ಕ್ಷೇತ್ರದ ಅಭಿವೃದ್ದಿಗೆ ಸಹಕರಿಸುವಂತೆ ಮನವಿ ಮಾಡಿದರು.

ಪ.ಪಂ.ಸದಸ್ಯ ನಂದೀಶ್ ಮಾತನಾಡಿ ಕೊರಟಗೆರೆ ಕ್ಷೇತ್ರದಲ್ಲಿ ಎಡಗೈ ಮತ್ತು ಬಲಗೈ ಸಮುದಾಯಗಳು ಒಂದಾಗಿದ್ದು ಡಾ.ಜಿ.ಪರಮೇಶ್ವರ ರವರನ್ನು ಬೆಂಬಲಿಸುತ್ತಿದ್ದ ಅವರ 35 ವರ್ಷಗಳ ರಾಜಕೀಯ ಜೀವನದಲ್ಲಿ ಎಂದು ಮಾದಿಗ ಸಮುದಾಯವನ್ನು ಕೀಳಾಗಿ ಕಂಡಿಲ್ಲ ಎಲ್ಲರನ್ನು ಅಣ್ಣ ತಮ್ಮರಂತೆ ಒಟ್ಟಿಗೆ ಕರೆದೊಯ್ಯತಿದ್ದಾರೆ. ಮುಂದೆಯೂ ಎರಡೂ ಸಮುದಾಯಗಳು ಅಣ್ಣ-ತಮ್ಮಂದಿರಂತೆ ಕ್ಷೇತ್ರದಲ್ಲಿ ಅವರನ್ನು ಬೆಂಬಲಿಸಿ ಅವರ ಗೆಲುವಿಗೆ ಶ್ರಮಿಸೋಣ ಎಂದು ತಿಳಿಸಿದರು.

Advertisement

ಪತ್ರಿಕಾ ಗೋಷ್ಠಿಯಲ್ಲಿ ಮಾದಿಗಸಮುದಾಯದ ಮುಖಂಡರುಗಳಾದ ಕಣಿವೇ ಹನುಮಂತರಾಯ, ಜಯರಾಂ, ಸುರೇಶ್, ನರಸಿಂಹಮೂರ್ತಿ, ತಾ.ಪಂ.ಮಾಜಿ ಉಪಾಧ್ಯಕ್ಷೆ ನರಸಮ್ಮ, ರಾಘವೇಂದ್ರ, ಗಂಗಯ್ಯ, ಪರಿಶಿಷ್ಟ ಜಾತಿ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಹೆಚ್.ನಾಗರಾಜು, ದೊಡ್ಡಯ್ಯ, ಏರ್‌ಟೇಲ್ ಗೋಪಿ, ಮಲ್ಲೇಶಯ್ಯ, ನರಸಿಂಹಯ್ಯ, ಲಕ್ಷ್ಮೀ ನರಸಯ್ಯ, ಹನು ಮಂತರಾಜು, ಓಬಳೇಶ್, ರಾಮು, ಸೇರಿದಂತೆ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next