Advertisement

ಮಧ್ಯಪ್ರದೇಶದ ಮಾಜೀ ಮುಖ್ಯಮಂತ್ರಿ ಬಾಬು ಲಾಲ್ ಗೌರ್ ನಿಧನ

09:12 AM Aug 22, 2019 | Hari Prasad |

ಭೋಪಾಲ್: ಮಧ್ಯಪ್ರದೇಶದ ಮಾಜೀ ಮುಖ್ಯಮಂತ್ರಿ ಮತ್ತು ಭಾರತೀಯ ಜನತಾ ಪಕ್ಷದ ನಾಯಕ ಬಾಬುಲಾಲ್ ಗೌರ್ ಅವರು ಬುಧವಾರದಂದು ಭೋಪಾಲ್ ನಲ್ಲಿ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ಪ್ರಾಯವಾಗಿತ್ತು.

Advertisement

ಕೆಲವು ಸಮಯಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಗೌರ್ ಅವರನ್ನು ಕಳೆದ ವಾರ ನಗರದ ನರ್ಮದಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಗೌರ್ ಅವರು ಇಂದು ಮೃತರಾಗಿದ್ದಾರೆ.

ಬಾಬು ಲಾಲ್ ಅವರು 2004 ರಿಂದ 2005ರವರೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಬಾಬುಲಾಲ್ ಗೌರ್ ಅವರ ನಿಧನಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್, ಮಾಜೀ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next