ಭೋಪಾಲ್: 38 ವರ್ಷ ಪ್ರಾಯದ ಮಹಿಳೆಯೊಬ್ಬಳು ಮಧ್ಯಪ್ರದೇಶದ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಉಮಾಂಗ್ ಸಿಂಘಾರ್ ಅವರ ಬಂಗಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಅಂಚೆ ಕಚೇರಿಯ ‘ಈ’ ಹೂಡಿಕೆಯ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ
ಘಟನಾ ಸ್ಥಳದಲ್ಲಿ ಮಹಿಳೆ ಬರೆದಿಟ್ಟ ಡೆತ್ ನೋಟ್ ಸಿಕ್ಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಡೆತ್ ನೋಟ್ ನಲ್ಲಿ ಸಿಂಘಾರ್ ಹೆಸರನ್ನು ಉಲ್ಲೇಖಿಸಿದ್ದು, ತನ್ನ ಬದುಕಿಗೊಂದು ದಾರಿ ಕಲ್ಪಿಸಿಕೊಡುವುದಾಗಿ ತಿಳಿಸಿದ್ದರು. ಆದರೆ ಅದು ನೆರವೇರಲಿಲ್ಲ. ಹೀಗಾಗಿ ಇನ್ನೂ ನನ್ನಿಂದ ಕಾಯಲು ಸಾಧ್ಯವಿಲ್ಲ ಅದಕ್ಕಾಗಿ ಆತ್ಮಹತ್ಯೆಗೆ ಶರಣಾಗುವುದಾಗಿ ತಿಳಿಸಿದ್ದಳು.
ಭೋಪಾಲ್ ನ ಗಾಂಧ್ವಾನಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಸಿಂಘಾರ್, ಆ ಮಹಿಳೆ ಉತ್ತಮ ಗೆಳತಿಯಾಗಿದ್ದಳು. ಅಲ್ಲದೇ ಆಕೆ ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಳು ಎಂಬ ವಿಷಯ ತನಗೆ ತಿಳಿದಿಲ್ಲವಾಗಿತ್ತು ಎಂದು ಪ್ರತಿಕ್ರಿಯಿಸಿರುವುದಾಗಿ ವರದಿ ಹೇಳಿದೆ.
ಈ ಮಹಿಳೆ ಅಂಬಾಲಾ ನಿವಾಸಿಯಾಗಿದ್ದು, ಈಕೆ ಭೋಪಾಲ್ ನ ಶಹಪರ್ ಪ್ರದೇಶದಲ್ಲಿರುವ ಸಿಂಘಾರ್ ಅವರ ನಿವಾಸಕ್ಕೆ ಕಳೆದು ಒಂದು ವರ್ಷದಿಂದ ಬರುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ಕಳೆದ 25-30 ದಿನಗಳಿಂದ ಅಲ್ಲಿಯೇ ವಾಸ್ತವ್ಯ ಹೂಡಿದ್ದಳು ಎಂದು ವರದಿ ತಿಳಿಸಿದೆ. ಕಳೆದ ಎರಡು ದಿನಗಳಿಂದ ಮಾಜಿ ಸಚಿವ ಭೋಪಾಲ್ ನಿಂದ ಹೊರಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.