Advertisement

Madhya Pradesh: ಉಜ್ಜಯಿನಿಯನ್ನೇ ಜಾಗತಿಕ ಕಾಲಮಾನದ ಕೇಂದ್ರವಾಗಿಸುತ್ತೇವೆ: ಮ.ಪ್ರ ಸಿಎಂ

12:46 AM Dec 24, 2023 | Team Udayavani |

ಭೋಪಾಲ್‌: ಮಧ್ಯಪ್ರದೇಶದ ನೂತನ ಮುಖ್ಯ ಮಂತ್ರಿ ಮೋಹನ್‌ ಯಾದವ್‌ ಮಹತ್ವದ ಘೋಷಣೆ ಮಾಡಿದ್ದಾರೆ. ಜಾಗತಿಕ ಕಾಲಮಾಪನ ಕೇಂದ್ರವನ್ನು ಇಂಗ್ಲೆಂಡ್‌ನ‌ ಗ್ರೀನ್‌ವಿಚ್‌ನಿಂದ ಮಧ್ಯಪ್ರದೇಶದ ಉಜ್ಜಯಿನಿಗೆ ಬದಲಿಸಲು ಯತ್ನ ಆರಂಭಿಸುವುದಾಗಿ ತಿಳಿಸಿದ್ದಾರೆ.

Advertisement

ರಾಜ್ಯಪಾಲರ ಭಾಷಣಕ್ಕೆ ಅಲ್ಲಿನ ಮಧ್ಯ ಪ್ರದೇಶ ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿದ ಅವರು, ಭಾರತೀಯ ಸಮಯದ ಬಗ್ಗೆ 300 ವರ್ಷಗಳ ಹಿಂದೆಯೇ ಜಗತ್ತಿಗೆ ಗೊತ್ತಿತ್ತು. ಅನಂತರ ಪ್ಯಾರಿಸ್‌ನಲ್ಲಿ ಸಮಯ ಮಾಪನವನ್ನು ನಿರ್ಧರಿಸಲು ಯತ್ನಿಸಲಾಯಿತು. ಅದೇ ಮಾದರಿಯನ್ನು ಅನುಸರಿಸಿದ ಬ್ರಿಟನ್‌, ಗ್ರೀನ್‌ವಿಚ್‌ (ಇದು ಲಂಡನ್‌ನಲ್ಲಿರುವ ಉಪನಗರ) ಅನ್ನೇ ಮಾಪನದ ಕೇಂದ್ರವನ್ನಾಗಿ ಅಥವಾ ರೇಖಾಂಶವನ್ನಾಗಿ ತೀರ್ಮಾನಿಸಿತು ಎಂದು ಹೇಳಿದ್ದಾರೆ.

ಮಧ್ಯರಾತ್ರಿ 12 ಗಂಟೆ ಬಳಿಕ ದಿನ ಆರಂಭವಾ ಗುವುದನ್ನೂ ಅವರು ಟೀಕಿಸಿದ್ದಾರೆ. “ಯಾರೂ ಮಧ್ಯ ರಾತ್ರಿ 12ರಿಂದ ದಿನ ಆರಂಭಿಸುವುದಿಲ್ಲ, ಜನ ಒಂದೋ ಸೂರ್ಯೋದಯದ ಹೊತ್ತಿಗೆ ಅಥವಾ ತುಸು ತಡವಾಗಿ ಏಳು ತ್ತಾರೆ. ನಮ್ಮ ಸರಕಾರ ಉಜ್ಜಯಿನಿಯನ್ನೇ ಜಾಗತಿಕ ರೇಖಾಂಶ ಕೇಂದ್ರವನ್ನಾಗಿ ಪರಿಗಣಿಸಲು ಕೆಲಸ ಮಾಡುತ್ತದೆ’ ಎಂದಿದ್ದಾರೆ. ಭಾರತೀಯ ಜೋತಿಷ ಶಾಸ್ತ್ರದ ಪ್ರಕಾರ, ಉಜ್ಜಯಿನಿ ಭಾರತೀಯ ಕಾಲ ಮಾನದ ಕೇಂದ್ರಬಿಂದುವಾಗಿತ್ತು. ಅಲ್ಲಿಂದಲೇ ವಿವಿಧ ಸಮಯಗಳನ್ನು ನಿರ್ಧರಿಸಲಾಗುತ್ತಿತ್ತು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next