Advertisement

ಕೈಗೆ ಶಾಕ್‌:ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ;ಹೊಸ ಸರ್ವೆ

10:27 AM Aug 01, 2018 | |

ಭೂಪಾಲ್‌: ವರ್ಷಾಂತ್ಯದೊಳಗೆ ವಿಧಾನಸಭಾ ಚುನಾವಣೆಗೆ ಸಿದ್ದವಾಗಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಂಡರೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನುವ ಸಮೀಕ್ಷಾ ವರದಿಯನ್ನು ಸ್ಪಿಕ್‌ ಮಿಡಿಯಾ ನೆಟ್‌ವರ್ಕ್‌ ಬಹಿರಂಗ ಪಡಿಸಿದೆ. 

Advertisement

ಬಿಎಸ್‌ಪಿ- ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡರೆ ಬಿಜೆಪಿ ಪ್ರಬಲ ಸ್ಪರ್ಧೆ ಎದುರಿಸಬೇಕಾಗುತ್ತದೆ,  ಆದರೆ 230 ಸದಸ್ಯ ಬಲದ ವಿಧಾನಸಭೆಯಲ್ಲಿ 103 ಸ್ಥಾನಗಳನ್ನು ಮಾತ್ರ ಮೈತ್ರಿ ಕೂಟ ಗೆಲ್ಲುವ ವಾತಾವರಣವಿದೆ ಎಂದಿದೆ. ಬಹುಮತಕ್ಕೆ ಅಗತ್ಯವಾದ ಸ್ಥಾನಗಳು 116.

ಸದ್ಯ ಬಿಜೆಪಿ 147 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತದೊಂದಿಗೆ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಗುಜಾರಾತ್‌ ಚುನಾವಣೆಯಲ್ಲಿ ನೀಡಿದಂತಹ ಪ್ರಬಲ ಸ್ಪರ್ಧೆಯನ್ನು ಕಾಂಗ್ರೆಸ್‌ ಮೈತ್ರಿ ಕೂಟ ನೀಡುವ ಸಾಧ್ಯತೆಗಳಿವೆ ಎಂದು ಸಮೀಕ್ಷೆ ಹೇಳಿದೆ. 

ಬಿಜೆಪಿ 126 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರುವ ಎಲ್ಲಾ ಸಾಧ್ಯತೆಗಳಿವೆ ಎಂದು ತಮಿಳು ನಾಡು ಮೂಲದ ಸ್ಪಿಕ್‌ ಮಿಡಿಯಾ ನೆಟ್‌ವರ್ಕ್‌ ಸಮೀಕ್ಷಾ ವರದಿ ಹೇಳಿದೆ. 

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ -ಬಿಎಸ್‌ಪಿ ಮೈತ್ರಿ ಮಾಡಿಕೊಂಡರೆ 29 ರಲ್ಲಿ ಬಿಜೆಪಿ 16 ಸ್ಥಾನಗಳನ್ನು ಮಾತ್ರ ಗೆಲ್ಲಬಹದು. ಹಾಲಿ ಬಿಜೆಪಿ 26 ಸಂಸದರನ್ನು ಹೊಂದಿದ್ದು 10 ಸ್ಥಾನಗಳನ್ನು ಕಳೆದುಕೊಳ್ಳಬೇಕಾಗಬಹುದು ಎಂದು ಸಮೀಕ್ಷೆ ಹೇಳಿದೆ. 

Advertisement

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 45.79% ಮತಗಳೊಂದಿಗೆ 126 ಸ್ಥಾನ, ಕಾಂಗ್ರೆಸ್‌-ಬಿಎಸ್‌ಪಿ ಮೈತ್ರಿ ಕೂಟ 48.37% ಮತಗಳೊಂದಿಗೆ 103 ಸ್ಥಾನ ಮತ್ತು ಇತರರು 1 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ. 

2003 ರಲ್ಲಿ ಉಮಾ ಭಾರತಿ ಅವರು ಬಿಜೆಪಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ವರ್ಷದ  ಬಳಿಕ ಬಾಬುಲಾಲ್‌ ಗೌರ್‌ ಮುಖ್ಯಮಂತ್ರಿಯಾಗಿದ್ದರು. 2005 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು 2008 ಮತ್ತು 2013 ರಲ್ಲಿ ಸತತವಾಗಿ ಗೆಲುವು ಸಾಧಿಸಿ, ನಿರಂತರ 13 ವರ್ಷಗಳಿಂದ ಆಡಳಿತ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next