Advertisement

Madhya Pradesh: ಬಾಂಧವ್‌ಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮತ್ತೊಂದು ವ್ಯಾಘ್ರ ಸಾವು

06:57 PM Sep 20, 2023 | Team Udayavani |

ಉಮಾರಿಯಾ: ಮಧ್ಯಪ್ರದೇಶದ ಬಾಂಧವ್‌ಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಬಿಟಿಆರ್) ಬುಧವಾರ ಗಂಡು ಹುಲಿಯ ಮೃತದೇಹ ಪತ್ತೆಯಾಗಿದ್ದು, ಒಂದು ವಾರದಿಂದ ಈಚೆಗೆ ಒಟ್ಟು ಎರಡು ಹುಲಿಗಳು ಅಸುನೀಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತೆರಳಿದ ಸಮಯದಲ್ಲಿ ಹುಲಿಯ ಮೃತದೇಹ ಪತ್ತೆಯಾಗಿರುವುದು ಗಮನಕ್ಕೆ ಬಂದಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಮತ್ತು ಮೀಸಲು ಕ್ಷೇತ್ರಗಳ ಉಸ್ತುವಾರಿ ನಿರ್ದೇಶಕ ಲಖನ್ ಲಾಲ್ ಉಕೆ ಹೇಳಿದರು.

ಮೇಲ್ನೋಟಕ್ಕೆ ಮತ್ತೊಂದು ಹುಲಿಯೊಂದಿಗೆ ಕಾದಾಟದಿಂದ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 5-7 ವರ್ಷ ವಯಸ್ಸಿನ ಹುಲಿ ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next