ಕಳೆದೊಂದು ವರ್ಷದಲ್ಲಿ ದೇಶದಲ್ಲಿ 74 ಹುಲಿಗಳು ಸಾವನ್ನಪ್ಪಿದ್ದು, ಆ ಪಟ್ಟಿಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. “ನ್ಯಾಷನಲ್ ಟೈಗರ್ ಕನ್ಸರ್ವೇಷನ್ ಅಥಾರಿಟಿ’ (ಎನ್‌ಟಿಸಿಎ) ಬಹಿರಂಗಪಡಿಸಿರುವ ಅಂಕಿ-ಅಂಶಗಳ ಪ್ರಕಾರ, ಹುಲಿಗಳ ತವರು ಎಂದೇ ಖ್ಯಾತವಾಗಿರುವ ಮಧ್ಯಪ್ರದೇಶದಲ್ಲೇ ಅತಿ ಹೆಚ್ಚು ಹುಲಿಗಳು ಅಸುನೀಗಿವೆ. ಮಿಕ್ಕ ರಾಜ್ಯಗಳಲ್ಲಿ ಹುಲಿಗಳ ಸಾವಿನ ಪ್ರಮಾಣ ಎಷ್ಟಿದೆ. ಹುಲಿಗಳ ಸಾವಿಗೆ ಕಾರಣವೇನು ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.
ಮ.
ಪ್ರದೇಶ ಅಂಕಿ- ಅಂಶವೇಕೆ ಆತಂಕಕಾರಿ? :
ಮಧ್ಯಪ್ರದೇಶದಲ್ಲಿ ನಾಲ್ಕು ಹುಲಿ ಅಭಯಾರಣ್ಯಗಳಿವೆ. ಅವುಗಳೆಂದರೆ, ಕನ್ಹ, ಬಂಧವ್‌ಗಢ, ಪೆಂಚ್, ಸಾತು³ರ, ಪನ್ನಾ, ಸಂಜಯ್ ಡುಬ್ರಿ. 2018ರಲ್ಲಿ ದೇಶವ್ಯಾಪಿ ನಡೆಸಲಾಗಿದ್ದ ಹುಲಿ ಗಣತಿಯ ಪ್ರಕಾರ, ಮಧ್ಯ ಪ್ರದೇಶದಲ್ಲಿ ಒಟ್ಟು 526 ಹುಲಿಗಳಿದ್ದವು. ಇದು ಭಾರತ ದಲ್ಲೇ ಅತಿ ಹೆಚ್ಚು ಎನಿಸಿತ್ತು. ಕಳೆದೊಂದು ವರ್ಷದಲ್ಲಿ ಅಲ್ಲೀಗ 27 ಹುಲಿಗಳು ಸಾವನ್ನಪ್ಪಿದ್ದು ಅವುಗಳಲ್ಲಿ 9 ಗಂಡು ಹುಲಿಗಳು , 8 ಹೆಣ್ಣು ಹುಲಿಗಳು ಸೇರಿವೆ.
ಕಾರಣವೇನು? :
- ಹುಲಿಗಳ ಮಧ್ಯೆಯೇ ನಡೆಯುವ ಕಾಳಗ
- ಮುದಿತನ
- ಅನಾರೋಗ್ಯ
- ಕಾಡುಗಳ್ಳರ ಬೇಟೆ
- ಅನಧಿಕೃತ ವಿದ್ಯುತ್ ಬೇಲಿ
ರಾಜ್ಯ / ಸಾವು
ಮಧ್ಯಪ್ರದೇಶ 27
ಮಹಾರಾಷ್ಟ್ರ 15
ಕರ್ನಾಟಕ 11
ಅಸ್ಸಾಂ 05
ಕೇರಳ 04
ರಾಜಸ್ಥಾನ 04
ಉತ್ತರ ಪ್ರದೇಶ 03
ಆಂಧ್ರ 02
ಬಿಹಾರ 01
ಒಡಿಶಾ 01
ಛತ್ತೀಸ್‌ಗಡ 01