Advertisement

ಕಮಲನಾಥ್ ಸರಕಾರವನ್ನು ಬಿಜೆಪಿ ಬೀಳಿಸುವುದಿಲ್ಲ – ಅದಕ್ಕೆ ಇಲ್ಲಿದೆ ಕಾರಣ

12:32 PM Mar 12, 2020 | Team Udayavani |

ಭೋಪಾಲ್: ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ತಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕಮಲನಾಥ್ ಸರಕಾರದಲ್ಲಿದ್ದ 20 ಜನ ಶಾಸಕರು ರಾಜೀನಾಮೆ ನೀಡಿರುವುದರಿಂದ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ಅಲ್ಪಮತಕ್ಕೆ ಜಾರಿದೆ.

Advertisement

ಇನ್ನೊಂದೆಡೆ 20 ಜನ ಶಾಸಕರು ರಾಜೀನಾಮೆ ನೀಡಿರುವುದರಿಂದ ಸದನದ ಒಟ್ಟು ಸದಸ್ಯ ಬಲದಲ್ಲಿಯೂ ಕುಸಿತವಾಗಿದ್ದು ಇದೀಗ ಸರಳ ಬಹುಮತಕ್ಕೆ 105 ಸ್ಥಾನಗಳಷ್ಟೇ ಸಾಕಾಗಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ 107 ಶಾಸಕರನ್ನು ಹೊಂದಿರುವ ಬಿಜೆಪಿ ಸುಲಭವಾಗಿ ಅಧಿಕಾರಕ್ಕೇರಬಹುದಾಗಿದೆ.

ಆದರೆ ಹಿರಿಯ ಬಿಜೆಪಿ ನಾಯಕರೊಬ್ಬರು ‘ದಿ ಪ್ರಿಂಟ್’ಗೆ ನೀಡಿರುವ ಮಾಹಿತಿಯಂತೆ ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿ ಕಮಲನಾಥ್ ಸರಕಾರ ವಿರುದ್ಧ ಅವಿಶ್ವಾಸಮತ ನಿರ್ಣಯವನ್ನು ಮಂಡಿಸುವ ಸಾಧ್ಯತೆಗಳಿಲ್ಲ. ಇದಕ್ಕೆ ಅವರು ನೀಡಿರುವ ಕಾರಣ ಸ್ವಾರಸ್ಯಕರವಾಗಿದೆ.

ಇದೇ ಮಾರ್ಚ್ 16ರಿಂದ ಮಧ್ಯಪ್ರದೇಶ ವಿಧಾನ ಸಭೆಯ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ಕಮಲನಾಥ್ ಸರಕಾರಕ್ಕೆ ಬಜೆಟ್ ಮಂಡಿಸುವ ಅವಕಾಶವನ್ನು ಬಿಜೆಪಿ ನಿಡಲಿದೆ. ಆದರೆ ಬಳಿಕ ಬಜೆಟ್ ಗೆ ಅನುಮೋದನೆಯನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಕಮಲನಾಥ್ ಅವರು ನಿಜವಾದ ಸವಾಲನ್ನು ಎದುರಿಸಲಿದ್ದಾರೆ. ಯಾಕೆಂದರೆ ಆ ಸಂದರ್ಭದಲ್ಲಿ ಕಮಲನಾಥ್ ಬಳಿಯಲ್ಲಿ ಬಜೆಟ್ ಗೆ ಅನುಮೋದನೆ ಪಡೆದುಕೊಳ್ಳಲು ಬೇಕಾಗಿರುವಷ್ಟು ಶಾಸಕರ ಬೆಂಬಲ ಇರುವುದಿಲ್ಲ. ಹೀಗಾದಾಗ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರಕಾರ ತನ್ನಿಂತಾನೇ ಸದನದಲ್ಲಿ ವಿಶ್ವಾಸಮತವನ್ನು ಕಳೆದುಕೊಳ್ಳಲಿದೆ ಮತ್ತು ಕಮಲನಾಥ್ ತಮ್ಮ ಮುಖ್ಯಮಂತ್ರಿ ಪದಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗಲಿದೆ.

ಈ ಕಾರ್ಯತಂತ್ರವನ್ನು ಅನುಸರಿಸುವ ಮೂಲಕ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸರಕಾರವನ್ನು ಬೀಳಿಸಿದ ಅಪವಾದ ತನಗೆ ಬರದಂತೆ ನೋಡಿಕೊಳ್ಳುವ ಜಾಣ್ಮೆಯನ್ನು ಬಿಜೆಪಿ ಹೈಕಮಾಂಡ್ ತೋರಲಿದೆ ಎಂಬುದು ಅನಾಮಧೇಯ ಬಿಜೆಪಿ ಶಾಸಕರ ವಾದ.

Advertisement

ಇನ್ನು ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ಶಾಸಕರೊಬ್ಬರು ಅಭಿಪ್ರಾಯಪಟ್ಟಿರುವಂತೆ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಗೆ ಸೇರ್ಪಡೆಗೊಳ್ಳುವ ಕುರಿತಾಗಿ 2013ರಲ್ಲೇ ಮಾತುಕತೆಯಾಗಿತ್ತಂತೆ. ಅದು ಏಳು ವರ್ಷಗಳ ಬಳಿಕ ಇದೀಗ ಸಾಕಾರಗೊಂಡಿದೆ ಎನ್ನುತ್ತಾರೆ ಅವರು.

Advertisement

Udayavani is now on Telegram. Click here to join our channel and stay updated with the latest news.

Next