Advertisement

Madhya Pradesh; ಕೆಲ ಹುಲಿಗಳ ಸ್ಥಳಾಂತರಕ್ಕೆ ಎನ್‌ಟಿಸಿಎ ಒಪ್ಪಿಗೆ

12:57 AM Aug 12, 2024 | Team Udayavani |

ಭೋಪಾಲ್‌: ಮಧ್ಯಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಛತ್ತೀಸ್‌ಗಢ, ರಾಜಸ್ಥಾನ, ಹಾಗೂ ಒಡಿಶಾಗೆ ಕೆಲವು ಹುಲಿಗಳನ್ನು ಸ್ಥಳಾಂತರಿಸ ಲಾಗುತ್ತದೆ. ಈ ಬಗ್ಗೆ ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಧಿಕಾರ(ಎನ್‌ಟಿಸಿಎ) ಒಪ್ಪಿಗೆ ನೀಡಿರುವುದಾಗಿ ಮಧ್ಯಪ್ರದೇಶ ಸರಕಾರದ ಅಧಿಕಾರಿ ತಿಳಿಸಿದ್ದಾರೆ.

Advertisement

2022ರಲ್ಲಿ ನಡೆದಿದ್ದ ಗಣತಿ ಪ್ರಕಾರ 785 ಹುಲಿಗಳು ರಾಜ್ಯದಲ್ಲಿವೆ. ಇತರ ರಾಜ್ಯಗಳಿಗೆ ಹುಲಿಗಳನ್ನು ಸ್ಥಳಾಂತರಿಸುವುದರಿಂದ ಅವುಗಳ ಸಂರಕ್ಷಿಸಲು ಹೆಚ್ಚು ನೆರವಾಗಲಿದೆಎಂದು ವನ್ಯಜೀವಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹುಲಿಗಳನ್ನು ಸ್ವೀಕರಿಸುವ ಬಗ್ಗೆ 3 ರಾಜ್ಯ ಸರಕಾರಗಳು ಸಮ್ಮತಿ ನೀಡಿದ ಬಳಿಕವೇ ಸ್ಥಳಾಂತರ ಪ್ರಕ್ರಿಯೆ ಶುರುವಾಗಲಿದೆ. ಜತೆಗೆ ಯಾವ ಅಭಯಾ ರಣ್ಯಕ್ಕೆ ಹುಲಿಗಳನ್ನು ಕಳುಹಿಸಬೇಕೆಂಬ ವಿವರ ನೀಡು ವಂತೆಯೂ ಮ.ಪ್ರ. ಸರಕಾರ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next