ಭೋಪಾಲ್: ಈ ವರ್ಷ ಮಧ್ಯಪ್ರದೇಶದಲ್ಲಿ ಇಲ್ಲಿಯವರೆಗೆ 2,400ಕ್ಕೂ ಅಧಿಕ ಮಂದಿಗೆ ಡೆಂಗ್ಯೂ ಸೋಂಕು ತಗುಲಿದ್ದು, ಈ ಪೈಕಿ 95 ಮಂದಿ ಸದ್ಯ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಾಜ್ಯದ ಡೆಂಗ್ಯೂ ಸೋಂಕಿತರ ಆಸ್ಪತ್ರೆ ದಾಖಲಾತಿ ಪ್ರಮಾಣ ಶೇ.20ರಷ್ಟಿದೆ.
ಪ್ರಸಕ್ತ ವರ್ಷ ಅತಿ ಹೆಚ್ಚು ಅಂದರೆ 800 ಪ್ರಕರಣಗಳು ಕೇವಲ ಒಂದೇ ಜಿಲ್ಲೆ(ಮಂಡ್‌ಸೌರ್)ಯಲ್ಲಿ ಪತ್ತೆಯಾಗಿವೆ.
ಜಬಲ್ಪುರದಲ್ಲಿ 325 ಡೆಂಗ್ಯೂ ಕೇಸುಗಳು ಪತ್ತೆಯಾಗಿದ್ದು, ಉಳಿದವುಗಳು ಭೋಪಾಲ್, ಇಂದೋರ್, ಅಗಲ್ ಮಲ್ವಾ, ರತ್ನಮ್ ಜಿಲ್ಲೆಗಳಲ್ಲಿ ಕಂಡುಬಂದಿವೆ ಎಂದೂ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ದೇವಾಲಯ ನೆಲಸಮ ಅಕ್ಷಮ್ಯ ಅಫರಾಧ: ಸಂಸದ ಪ್ರತಾಪ್ ಸಿಂಹ ಕಿಡಿ