ಭೋಪಾಲ್: ಸಚಿವರೊಬ್ಬರ ಆಪ್ತರೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಮಧ್ಯಪ್ರದೇಶದ ಸಚಿವ ಕೈಲಾಶ್ ವಿಜಯವರ್ಗಿಯಾ ಅವರ ಆಪ್ತ ಹಾಗೂ ಸ್ಥಳೀಯ ಬಿಜೆಪಿ ಮುಖಂಡ ಮೋನು ಕಲ್ಯಾಣೆ ಅವರನ್ನು ಭಾನುವಾರ (ಜೂ.23 ರಂದು) ಮುಂಜಾನೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮೋನು ಕಲ್ಯಾಣಿ ಬಿಜೆಪಿಯ ಯುವ ಮೋರ್ಚಾದ ನಗರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಚಿವ ವಿಜಯವರ್ಗೀಯ ಮತ್ತು ಅವರ ಮಗ ಮಾಜಿ ಶಾಸಕ ಆಕಾಶ್ ವಿಜಯವರ್ಗಿಯ ಅವರೊಂದಿಗೆ ಆಪ್ತರಾಗಿದ್ದರು.
ಹಳೆಯ ದ್ವೇಷದಿಂದ ಈ ಕೃತ್ಯವೆಸೆಯಲಾಗಿದೆ ಎನ್ನಲಾಗುತ್ತಿದ್ದು,ಸ್ಥಳೀಯರಾದ ಪಿಯೂಷ್ ಮತ್ತು ಅರ್ಜುನ್ ಎಂಬ ಎನ್ನುವವರು ಗುಂಡು ಹಾರಿಸಿ ಪರಾರಿ ಆಗಿದ್ದಾರೆ ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ.
ನಗರದ ಚಿಮನ್‌ಬಾಗ್‌ನಲ್ಲಿ ವಾಹನದ ರ‍್ಯಾಲಿಗಾಗಿ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಹಾಕುತ್ತಿದ್ದಾಗ, ಇಬ್ಬರು ಬಂದು ಕಲ್ಯಾಣಿ ಅವರಲ್ಲಿ ಫೋನ್ ನಂಬರ್ ಕೇಳಿದ್ದಾರೆ. ಈ ವೇಳೆ ಕಲ್ಯಾಣಿ ಮೊಬೈಲ್ ಹೊರಕ್ಕೆ ತೆಗೆಯುತ್ತಿದ್ದಾಗ ದುಷ್ಕರ್ಮಿಗಳು ಎದೆಗೆ ಗುಂಡಿಟ್ಟು ಪರಾರಿ ಆಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿರುವುದಾಗಿ ವರದಿ ತಿಳಿಸಿದೆ.
ಕಲ್ಯಾಣ್ ಅವರನ್ನು ಕೂಡಲೇ ಅವರ ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಕೊಲೆ ನಡೆದ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಕಲ್ಯಾಣೆ ಅವರ ನಿವಾಸದ ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕಲ್ಯಾಣೆ ಅವರು ತಮ್ಮ ಪ್ರದೇಶದಲ್ಲಿ ರಾಜಕೀಯ ಕಾರ್ಯಕ್ರಮಗಳನ್ನು ಆಯೋಜಿಸಲು ಹೆಸರುವಾಸಿಯಾಗಿದ್ದರು. ಇದರಲ್ಲಿ ಬಿಜೆಪಿಯ ಹಿರಿಯ ನಾಯಕರು ಮತ್ತು ಇತರ ಪ್ರಮುಖ ವ್ಯಕ್ತಿಗಳು ಭಾಗವಹಿಸುತ್ತಿದ್ದರು.