ಮಧ್ಯಪ್ರದೇಶ: ಇತ್ತೀಚಿಗೆ ಟೊಮ್ಯಾಟೋ ಬೆಲೆ ಗಗನಕ್ಕೇರಿದೆ ಅಡುಗೆ ಆಡುವಾಗ ಟೊಮ್ಯಾಟೋ ಹಾಕಬೇಕೋ ಬೇಡವೋ ಎಂದು ಯೋಚಿಸುವ ಕಾಲ ಬಂದಿದೆ ಅಷ್ಟರ ಮಟ್ಟಿಗೆ ಟೊಮ್ಯಾಟೋ ಬೆಲೆ ಏರಿಕೆಯಾಗಿದೆ.
ಅಷ್ಟೇ ಯಾಕೆ ಇತ್ತೀಚಿಗೆ ದೈತ್ಯ ಮ್ಯಾಕ್ ಡೊನಾಲ್ಡ್ಸ್ ತಾನು ತಯಾರಿಸುವ ಬರ್ಗರ್ ನಲ್ಲಿ ಟೊಮ್ಯಾಟೋ ಹಾಕುವುದಿಲ್ಲ ಎಂದು ಪ್ರಕಟಣೆಯನ್ನೇ ಹೊರಡಿಸಿತ್ತು. ಇವರಿಗೆ ಇಷ್ಟೊಂದು ಆರ್ಥಿಕ ತೊಂದರೆಯಾಗಿದ್ದರೆ ಇನ್ನು ಜನ ಸಾಮಾನ್ಯರ ಪರಿಸ್ಥಿತಿ ಹೇಗಿರಬೇಡ ಅಲ್ಲವೇ…
ಗಗನಕ್ಕೇರುತ್ತಿರುವ ಟೊಮ್ಯಾಟೋ ಬೆಲೆಯಿಂದ ಅನೇಕ ಜನರ ಆರ್ಥಿಕತೆಯ ಮೇಲೆ ಹೊಡೆತಬಿದ್ದಿದೆ, ಆದರೆ ಈ ಬೆಲೆ ಏರಿಕೆಯಾದ ಟೊಮ್ಯಾಟೋ ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಗಂಡ ಮತ್ತು ಹೆಂಡತಿಯ ನಡುವಿನ ಜಗಳಕ್ಕೆ ಕಾರಣವಾಗಿದೆ.
ಹೌದು ಗಂಡ ಅಡುಗೆ ಮಾಡುವಾಗ ತನ್ನ ಪತ್ನಿಯ ಬಳಿ ಕೇಳದೆ ಪದಾರ್ಥಕ್ಕೆ ಟೊಮ್ಯಾಟೋ ಬಳಸಿದ ಎಂಬ ಕಾರಣಕ್ಕೆ ಜಗಳ ನಡೆದು ಪತ್ನಿ ಮನೆ ಬಿಟ್ಟು ಹೋಗಿರುವ ವಿಚಿತ್ರ ಘಟನೆಯೊಂದು ಮಧ್ಯ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಏನಿದು ಘಟನೆ: ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಟಿಫಿನ್ ಸರ್ವಿಸ್ ನಡೆಸುತ್ತಿರುವ ಸಂಜೀವ್ ಬರ್ಮನ್, ಟೊಮ್ಯಾಟೋ ಬೆಲೆ ಏರಿಕೆಯಾದ ಬಳಿಕ ತಾನು ಮಾಡಿದ ಅಡುಗೆಗೆ ಎರಡು ಟೊಮ್ಯಾಟೋಗಳನ್ನು ಬಳಸಿದ್ದ ಇದು ಹೆಂಡತಿಯ ಗಮನಕ್ಕೆ ಮೊದಲು ಬಂದಿರಲಿಲ್ಲ ಆದರೆ ಒಟ್ಟಿಗೆ ಊಟ ಮಾಡುವ ವೇಳೆ ಪದಾರ್ಥದಲ್ಲಿ ಟೊಮ್ಯಾಟೋ ಪತ್ತೆಯಾಗಿದೆ ಇದನ್ನು ಕಂಡ ಪತ್ನಿ ಪತಿಯ ಮೇಲೆ ರೇಗಾಡಿದ್ದಾರೆ ಅಲ್ಲದೆ ಇದೆ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ ನನ್ನನ್ನು ಕೇಳದೆ ಪದಾರ್ಥಕ್ಕೆ ಟೊಮ್ಯಾಟೋ ಯಾಕೆ ಹಾಕಿದ್ದೀರಿ ಎಂದು ಜಾಗವಾಡಿದ್ದಾರೆ ಆದರೆ ಕೊನೆಗೆ ಜಗಳ ವಿಕೋಪಕ್ಕೆ ತೆರಳಿ ಪತ್ನಿ ತನ್ನ ಮಗಳ ಜೊತೆ ಮನೆ ಬಿಟ್ಟು ತೆರಳಿದ್ದಾಳೆ.
ಸಿಟ್ಟಿನಲ್ಲಿದ್ದ ಪತಿಯೂ ಮೊದಲು ಪತ್ನಿ ಸಿಟ್ಟು ಇಳಿದ ಬಳಿಕ ಮನೆಗೆ ಬರಬಹುದು ಎಂದುಕೊಂಡಿದ್ದ ಆದರೆ ಪತ್ನಿ ಮತ್ತು ಮಗಳು ಎರಡು ದಿನವಾದರೂ ಮನೆಗೆ ಬಾರದೇ ಇರುವುದನ್ನು ಕಂಡ ಪತಿ ತನ್ನ ಕುಟುಂಬದವರ ಜೊತೆ ಪತ್ನಿ ಮಗಳ ವಿಚಾರ ವಿಚಾರಿಸಿದ್ದಾನೆ ಆದರೆ ಯಾವುದೇ ಸುಳಿವು ಸಿಗಲಿಲ್ಲ ಇದರಿಂದ ಗಾಬರಿಗೊಂಡ ಪತಿ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ದೂರು ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾದ ತಾಯಿ ಮಗಳ ಪತ್ತೆ ಕಾರ್ಯಕ್ಕೆ ಬಲೆ ಬಿಸಿದ್ದಾರೆ.
ಟೊಮೆಟೊ ಬೆಲೆ ಯಾರ ಯಾರ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಎಂದು ಹೇಳಲು ಸಾಧ್ಯವಾಗುವುದಿಲ್ಲ ಹಾಗಾಗಿ ಆದಷ್ಟು ಬೆಲೆ ಟೊಮ್ಯಾಟೋ ಬೆಲೆ ಇಳಿಯಲಿ ಎಂಬುದೇ ನಮ್ಮ ಆಶಯ…
ಇದನ್ನೂ ಓದಿ: ಫ್ರಾನ್ಸ್ ಪ್ರವಾಸ ಆರಂಭಿಸಿದ ಪ್ರಧಾನಿ ಮೋದಿ: ಬಾಸ್ಟಿಲ್ ಡೇ ಪಥಸಂಚಲನದಲ್ಲಿ ಭಾಗಿ