Advertisement

Madhya Pradesh: ಪತ್ನಿ ಶವವನ್ನು ಮೂರು ದಿನ ಫ್ರೀಜರ್‌ ನಲ್ಲಿಟ್ಟ ಪತಿ; ಕೊಲೆ ಆರೋಪ

09:43 AM Jul 03, 2023 | Suhan S |

ಭೋಪಾಲ್:‌ ಮೃತಪಟ್ಟ ಪತ್ನಿಯ ಶವವನ್ನು ಪತಿಯೊಬ್ಬ ಮೂರು ದಿನಗಳ ಕಾಲ ಮನೆಯ ಫ್ರೀಜರ್‌ ನಲ್ಲಿಟ್ಟ ಘಟನೆ ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ಮೃತ ಮಹಿಳೆಯನ್ನು ಸುಮಿತ್ರಿ (40) ಎಂದು ಗುರುತಿಸಲಾಗಿದೆ. ಭಾನುವಾರ ಮೃತ ಮಹಿಳೆಯ ಸಹೋದರ ಕೊಲೆ ಆರೋಪದ ಮೇಲೆ ದೂರು ನೀಡಿದ ಬಳಿಕ ಶವವನ್ನು ವಶ ಪಡಿಸಿಕೊಂಡಿದ್ದಾರೆ.

ಶುಕ್ರವಾರ ನನ್ನ ಪತ್ನಿ ಜಾಂಡೀಸ್‌ ನಿಂದ ಮೃತಪಟ್ಟಿದ್ದಾಳೆ. ತಮ್ಮ ಮಗ ಮುಂಬೈಯಿಂದ ಬರುವವರೆಗೆ ನಾನು ಶವವನ್ನು ಫ್ರೀಜರ್‌ ನಲ್ಲಿಟ್ಟಿದ್ದೆ. ಆ ಬಳಿಕ ಅಂತ್ಯಕ್ರಿಯೆಯನ್ನು ನಡೆಸಲಿದ್ದೆ ಎಂದು ಸುಮಿತ್ರಿ ಅವರ ಪತಿ ಪೊಲೀಸರ ಬಳಿ ಹೇಳಿದ್ದಾರೆ.

ಆದರೆ ಸುಮಿತ್ರಿ ಅವರ ಸಹೋದರ ತನ್ನ ಭಾವ ಅಕ್ಕನ ಮೇಲೆ ದೌರ್ಜನ್ಯವೆಸಗುತ್ತಿದ್ದರು. ಅವರೇ ಅಕ್ಕನನ್ನು ಹತ್ಯೆಗೈದು ಶವವನ್ನು ಫ್ರೀಜರ್‌ ನಲ್ಲಿಟ್ಟಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

“ಸುಮಿತ್ರಿ ಎಂದು ಗುರುತಿಸಲಾದ 40 ವರ್ಷದ ಮಹಿಳೆಯ ಶವವನ್ನು ನಾವು ವಶಪಡಿಸಿಕೊಂಡಿದ್ದೇವೆ. ಆಕೆಯ ಸಹೋದರ ಅಭಯ್ ತಿವಾರಿ ತನ್ನ ಭಾವ ಅವರನ್ನು ಕೊಂದಿದ್ದಾನೆ ಎಂದು ನಮಗೆ ದೂರು ನೀಡಿದ ನಂತರ ನಾವು ಶವವನ್ನು ಪಡೆದುಕೊಂಡಿದ್ದೇವೆ” ಎಂದು ಸಿಟಿ ಕೊತ್ವಾಲಿ ಪೊಲೀಸ್ ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ.

Advertisement

ಜೂ.30 ರಂದು ಪತ್ನಿ ಜಾಂಡೀಸ್‌ ನಿಂದ ಮೃತಪಟ್ಟಿದ್ದಾಳೆ ಎಂದು ಪತಿ ಹೇಳಿರುವುದಾಗಿ ಪೊಲೀಸರು ಹೇಳಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next