Advertisement

ಹಸುವಿನ ಮುಂದೆ ಮೂತ್ರ ವಿಸರ್ಜಿಸಿದ್ದಕ್ಕೆ ಥಳಿತ!

08:19 PM Jan 29, 2022 | Team Udayavani |

ಭೋಪಾಲ್‌: ಹಸುವಿನ ಮುಂದೆ ಮೂತ್ರ ವಿಸರ್ಜನೆ ಮಾಡಿದ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಥಳಿಸಿರುವ ಘಟನೆ ಮಧ್ಯಪ್ರದೇಶದ ರಾತ್ಲಾಮ್‌ ಜಿಲ್ಲೆಯಲ್ಲಿ ನಡೆದಿದೆ.

Advertisement

ಆ ವಿಡಿಯೋ ವೈರಲ್‌ ಆಗಿದ್ದು, ಹಲ್ಲೆ ನಡೆಸಿರುವ ಆರೋಪಿಯನ್ನು ಬಂಧಿಸಲಾಗಿದೆ. ಸೈಫುದ್ದೀನ್‌ ಪಾಟೀಲ್‌ವಾಲಾ ಹೆಸರಿನ ವ್ಯಕ್ತಿ ಹಸುವಿನ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಾನೆ.

ಇದೇ ಕಾರಣಕ್ಕಾಗಿ ಆತನಿಗೆ ವೀರೇಂದ್ರ ರಾಥೋಡ್‌ ಎಂಬಾತ ಥಳಿಸಿದ್ದಾನೆ. ಸೈಫುದ್ದೀನ್‌ ಕ್ಷಮೆಯಾಚಿಸಿದರೂ, ಸುಮ್ಮನಿರದೆ ಹೊಡೆದಿದ್ದಾನೆ.

ಇದನ್ನೂ ಓದಿ:ತುಮಕೂರು:ಕುರಿ ಮೇಯಿಸಲು ಹೋದ ಒಂದೇ ಕುಟುಂಬದ ಮೂವರು ಮಕ್ಕಳು ಕೆರೆಯ ಗುಂಡಿಗೆ ಬಿದ್ದು ಸಾವು

ಈ ವಿಚಾರವಾಗಿ ಸೈಫುದ್ದೀನ್‌ ನೀಡಿರುವ ದೂರನ್ನು ಆಧರಿಸಿ, ವೀರೇಂದ್ರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next