Advertisement

ಮಧ್ಯಪ್ರದೇಶ: ಕಲಬೆರಕೆ ತಡೆಗೆ ಕಾಯ್ದೆ ಬಳಕೆ

10:03 AM Dec 23, 2019 | Team Udayavani |

ಇಂದೋರ್‌: ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕಲಬೆರಕೆ ಮಾಡುವವರ ವಿರುದ್ಧ ಮಧ್ಯಪ್ರದೇಶ ಸರಕಾರ ಯುದ್ಧ ಸಾರಿದೆ. 1980ರ ರಾಷ್ಟ್ರೀಯ ಭದ್ರತಾ ಕಾಯ್ದೆ ಯಡಿ, 105 ಎಫ್ಐಆರ್‌ಗಳನ್ನು ದಾಖಲಿಸಿ, 40 ಜನರನ್ನು ಬಂಧಿಸಿದೆ. ಇದಕ್ಕೆ ಅತ್ಯಂತ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನೇ ಬಳಸಿಕೊಳ್ಳಲಾಗಿದೆ.

Advertisement

ಈ ಕಾಯ್ದೆಯನ್ವಯ, ಯಾವುದೇ ವ್ಯಕ್ತಿಯನ್ನುಒಂದು ವರ್ಷದವರೆಗೆ ಆರೋಪಪಟ್ಟಿ ದಾಖಲಿಸದೆಯೇ ಬಂಧನದಲ್ಲಿಡಬಹುದು. ಹಾಗೆಯೇ ಆರಂಭಿಕ 10 ದಿನಗಳವರೆಗೆ ಅವರ ಮೇಲಿನ ಆರೋಪಗಳೇನೆಂದು ತಿಳಿಸುವ ಅಗತ್ಯವಿಲ್ಲ. ಆ ವ್ಯಕ್ತಿಗಳು ಉಚ್ಚ ನ್ಯಾಯಾಲಯದ ಸಲಹಾ ಸಮಿತಿಯೆದುರು ಅರ್ಜಿ ಸಲ್ಲಿಸಬಹುದು. ಆದರೆ ಅದಕ್ಕೆ ವಕೀಲರನ್ನು ಬಳಸುವಂತಿಲ್ಲ!

Advertisement

Udayavani is now on Telegram. Click here to join our channel and stay updated with the latest news.

Next