Advertisement

Hanuman ಭಜಿಸಿದ ಕರ್ನಾಟಕ ಕಾಂಗ್ರೆಸ್‌ ತಂತ್ರದ ಬೆನ್ನೇರಿದ ಮಧ್ಯಪ್ರದೇಶ ಕಾಂಗ್ರೆಸ್‌!

11:12 PM Oct 16, 2023 | Team Udayavani |

ಹಿಂದುತ್ವದ ಮೂಲಕ ಇಡೀ ದೇಶದ ಮತಬ್ಯಾಂಕ್‌ ಮೇಲೆ ಹಿಡಿತ ಸಾಧಿಸಿ ಅಧಿಕಾರ ಹಿಡಿದ ಬಿಜೆಪಿ ಅತ್ಯಂತ ಬಲಿಷ್ಠವಾಗಿದೆ. ಅದನ್ನು ಸೋಲಿಸಲು ಎದುರಾಳಿಗಳೆಲ್ಲ ನೂರಾರು ತಂತ್ರಗಳಿಗೆ ಶರಣಾಗಿದ್ದಾರೆ. ಕಾಂಗ್ರೆಸ್‌ ಸದ್ದಿಲ್ಲದೇ ಮೃದು ಹಿಂದುತ್ವಕ್ಕೆ ಬದಲಾಗಿದೆ. ಮಧ್ಯ ಪ್ರದೇಶ ದಲ್ಲಂತೂ ಇನ್ನೊಂದು ಹೆಜ್ಜೆ ಮುಂದಡಿ ಯಿಟ್ಟಿದೆ. ಬಿಜೆಪಿ ರಾಮನ ಹೆಸರು ಹೇಳಿ ದರೆ, ಕಾಂಗ್ರೆಸ್‌ ಹನುಮಂತನನ್ನೇ ಎದುರಿಟ್ಟುಕೊಂಡಿದೆ. ಅಲ್ಲಿಗೆ ಮತದಾರರು ರಾಮ ಮತ್ತು ಹನುಮಂತನ ನಡುವೆ ಯಾರನ್ನು ಆಯ್ದುಕೊಳ್ಳಬೇಕು ಎಂಬ ಗೊಂದಲಕ್ಕೆ ಬೀಳುವಂತೆ ಮಾಡಲಾಗಿದೆ. ಇದು ಅತ್ಯಂತ ಜಾಣ ನಡೆ!

Advertisement

ಎಲ್ಲಕ್ಕಿಂತ ಮುಖ್ಯವಾಗಿ ಮಧ್ಯಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಶಿವರಾಜ್‌ ಸಿಂಗ್‌ ಚೌಹಾಣ್‌ರ ಅಭೇದ್ಯ ಬುಧಿ° ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾರು ಗೊತ್ತಾ? ರಾಮಾಯಣ-2 ಟೀವಿ ಧಾರಾ ವಾಹಿಯ ಹನುಮಾನ್‌ ಪಾತ್ರಧಾರಿ ವಿಕ್ರಮ್‌ ಮಸ್ತಾಲ್‌! ಇದು ಅತ್ಯಂತ ಸಾಂಕೇತಿಕ. ಜೂ.12ರಂದು ಕಾಂಗ್ರೆಸ್‌ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಗೆ ಜಬಲ್ಪುರದ ಮೂಲಕ ಅಭಿಯಾನ ಆರಂಭಿಸಿತ್ತು. ಆಗ ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾರನ್ನು ಹನುಮಂತನ ಗದೆಯ ಮೂಲಕ ಸ್ವಾಗತಿಸಿತ್ತು. ಜಬಲ್ಪುರದಲ್ಲಿ ಎಲ್ಲಿ ನೋಡಿದರೂ ಹನು ಮಂತನ ಕಟೌಟ್‌ಗಳು ಕಂಗೊಳಿಸಿದ್ದವು.

ಈ ತಂತ್ರವನ್ನು ಕಾಂಗ್ರೆಸ್‌ ಪಡೆದು ಕೊಂಡಿದ್ದು ಕರ್ನಾಟಕದಿಂದ! ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದ್ದು ಎಲ್ಲರಿಗೂ ಗೊತ್ತಿದೆ. ಆಗ ಕಾಂಗ್ರೆಸ್‌ ಬಜರಂಗದಳ ವನ್ನು ನಿಷೇಧಿ ಸು ತ್ತೇನೆ ಎಂದು ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. ಅದು ಬಿಜೆಪಿಯನ್ನು ಕೆರಳಿಸಿತ್ತು. ಇದಕ್ಕೆ ಅಷ್ಟೇ ದಿಟ್ಟ ಉತ್ತರ ನೀಡಿದ್ದ ಕಾಂಗ್ರೆಸ್‌, ಬಜರಂಗದಳಕ್ಕೂ ಹನುಮಂತ ನಿಗೂ ಏನು ಸಂಬಂಧ ಎಂದು ಪ್ರಶ್ನಿಸಿತ್ತು. ಇದೇ ವೇಳೆ, ಬಿಜೆಪಿ ರಾಜ್ಯಾದ್ಯಂತ ಹನುಮಾನ್‌ ಚಾಲೀಸಾ ಪಠಣ ನಡೆಸಿತ್ತು. ಅದಕ್ಕೂ ತಕ್ಕ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್‌, ತಾವೂ ಹನುಮನ ಭಕ್ತರೇ ಆಗಿದ್ದು, ತಮಗೂ ಚಾಲೀಸಾ ಗೊತ್ತು ಎಂದು ಅದನ್ನು ಪಠಣ ಮಾಡಿ ಸೆಡ್ಡು ಹೊಡೆದಿತ್ತು. ಈಗ ಕಾಂಗ್ರೆಸ್‌ ಮಧ್ಯಪ್ರದೇಶದ 230 ಕ್ಷೇತ್ರಗಳಲ್ಲೂ ಹನುಮಂತನ ಕಥನವಿರುವ ಸುಂದರಕಾಂಡ ಪಾರಾಯಣ ಮಾಡಲು ತೀರ್ಮಾನಿಸಿದೆ!

Advertisement

Udayavani is now on Telegram. Click here to join our channel and stay updated with the latest news.

Next